ಭುವನೇಶ್ವರ: ಒಡಿಶಾ ಸರ್ಕಾರವು ತುರ್ತು ಪರಿಸ್ಥಿತಿಯ ಸಂದರ್ಭ ಜೈಲಿನಲ್ಲಿದ್ದವರಿಗೆ ಮಾಸಿಕ ₹20 ಸಾವಿರ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಘೋಷಿಸಿದೆ ಎಂದು ರಾಜ್ಯ ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಆಂತರಿಕ ಭದ್ರತಾ ಕಾಯ್ದೆ ನಿರ್ವಹಣೆ ಅಡಿಯಲ್ಲಿ ತುರ್ತು ಪರಿಸ್ಥಿತಿ ವೇಳೆ ಜೈಲು ಪಾಲಾದವರಿಗೆ ಮಾಸಿಕ ಪಿಂಚಣಿ ನೀಡುವುದಾಗಿ ಜನವರಿ 2ರಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದರು.