HEALTH TIPS

ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನಾಚರಣೆ - ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು ಗಡಿನಾಡ ಉತ್ಸವ - 2025

ಕಾಸರಗೋಡು:  ಕರ್ನಾಟಕ ರಾಜ್ಯ ಮಟ್ಟದ ಹಿರಿಯ ನಾಟಕ  ಮತ್ತು ಸಾಂಸ್ಕøತಿಕ ಸಂಘಟನೆಯಾದ ವಿ. ಕೆ. ಎಂ ಕಲಾವಿದರು (ರಿ ) ಬೆಂಗಳೂರು ಇದರ 44ನೇ ಸಂಸ್ಥಾಪನಾ ವμರ್Áಚರಣೆಯ ಅಂಗವಾಗಿ, ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿμÁ್ಠನ(ರಿ ),ಕನ್ನಡ ಗ್ರಾಮ, ಕಾಸರಗೋಡು, ಇದರ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಅಪರಾಹ್ನ ಗಂಟೆ 4.00 ರಿಂದ ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು,ಕಾಸರಗೋಡು ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿ. ಕೆ. ಎಂ.ಕಲಾವಿದರು (ರಿ )ಬೆಂಗಳೂರು ಇದರ ನೇತೃತ್ವದಲ್ಲಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ. ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ 1) ರೂಪ ಕಲಾನಿಕೇತನ ಬೆಂಗಳೂರು ಅಭಿನಯಿಸುವ ಎನ್.ಎಸ್.ರಾವ್  ವಿರಚಿತ:ಭ್ರಷ್ಟ ಕನ್ನಡ ನಾಟಕ, ನಿರ್ದೇಶನ ಡಿ ವೆಂಕಟರಮಣಯ್ಯ (ಅಪ್ಪಾಜಿ), 

2) ವಿ. ಕೆ. ಎಂ. ಅರ್ಪಿಸುವ ರಂಗಸೇತುವೆ ಟ್ರಸ್ಟ್ ಬೆಂಗಳೂರು  ಅಭಿನಯಿಸುವ ರಚನೆ ಡಾ ಪ್ರಭು ಶಂಕರ ಅವರ ಅಂಗುಲೀಮಾಲ" ಕನ್ನಡ ನಾಟಕ, ನಿರ್ದೇಶನ ಮತ್ತು ಸಂಗೀತ ಐ. ಟಿ.ಐ. ರಾಮಮೂರ್ತಿ 

3) ವಿ. ಕೆ. ಎಂ. ಕಲಾವಿದರು(ರಿ )ಬೆಂಗಳೂರು ಅಭಿನಯಿಸುವ ಬೇಲೂರು ಕೃಷ್ಣಮೂರ್ತಿ ಅವರ "*ಲಚ್ಚಿ*" ಸಾಮಾಜಿಕ ನಾಟಕ 

*ನಿರ್ದೇಶನ*:-ಸಿ. ಎಂ. ಟಿ.

4) ರಂಗ ಪರಿಸರ ಧಾರವಾಡ ಅಭಿನಯಿಸುವ ಖರೇ ಖರೇ ಸಂಗ್ಯಾ ಬಾಳ್ಯ - ನಾಟಕ ಹಾಗೂ ಭರತನಾಟ್ಯ ನಿರ್ದೇಶನ ವಿಠಲ್ ಕೊಪ್ಪದ್  

5) ಜ್ಞಾನವಿ ಸಂಗೀತ ವಿದ್ಯಾಲಯ,ಕೆ. ಆರ್. ಪುರಂ. ಬೆಂಗಳೂರು ಇವರಿಂದ ಸಂಗೀತ ಮತ್ತು ಭರತನಾಟ್ಯ 

6) ಲಕ್ಷಣ ಸುವರ್ಣ ಬೆಂಗಳೂರು ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಸಾದರಪಡಿಸಲಿದ್ದಾರೆ. 

ವಿ. ಕೆ. ಎಂ. ಕಲಾವಿದರು (ರಿ ) ಬೆಂಗಳೂರು ಇದರ ಸಂಸ್ಥಾಪಕರಾದ ಸಿ. ಎಂ. ತಿಮ್ಮಯ್ಯ ಅವರು ಗಡಿನಾಡು, ಹೊರನಾಡು ಮತ್ತು ವಿವಿಧ ರಾಜ್ಯಗಳಲ್ಲಿ ವಷರ್ಂಪ್ರತಿ  ನೂರಾರು ನಾಟಕ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಿ ಕರ್ನಾಟಕ ರಾಜ್ಯದಿಂದ ವಿವಿಧ ನಾಟಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗದೊಂದಿಗೆ ಕೊಂಡೊಯ್ಯುತ್ತಿದ್ದಾರೆ.ಸಿ. ಎಂ. ತಿಮ್ಮಯ್ಯ ಅವರಿಗೆ 2025 ರ ಅವಧಿಯ ಕರ್ನಾಟಕ ರಾಜ್ಯದ ಪ್ರತಿಷ್ಠಿತ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,ನೀಡಿ ಗೌರವಿಸಲ್ಪಡಲು ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಶಿಫಾರಸ್ಸು ಮಾಡುತ್ತಿದ್ದಾರೆ. ಸಿ. ಎಂ. ತಿಮ್ಮಯ್ಯ ಬೆಂಗಳೂರು ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿμÁ್ಠನದ ಪ್ರತಿಷ್ಠಿತ ಕೇರಳ ರಾಜ್ಯ ಮಟ್ಟದ ವಿಶ್ವರಂಗ ಭೂಮಿ ದಿನಾಚರಣೆ ಪ್ರಶಸ್ತಿ - 2025 ನೀಡಿ ಗೌರವಿಸಲಾಗುವುದು.

ಮಾರ್ಚ್  27 ರಂದು ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಕಾಸರಗೋಡು ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು ಗಡಿನಾಡ ಉತ್ಸವದಲ್ಲಿ 100 ಮಂದಿ  ಗಾಯಕ, ಗಾಯಕಿಯರಿಂದ ಏಕ ಕಂಠಗಾಯನ ನೂರಾರು ಗಾಯಕ ಗಾಯಕಿಯರಿಂದ ಏಕಕಾಲದಲ್ಲಿ ಸಮೂಹ ಕನ್ನಡ ನಾಡ ಗೀತಾಗಾಯನ,ರೈತ ಗೀತಾಗಾಯನ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಕನ್ನಡ ಚಿತ್ರ ಗೀತಾ ಗಾಯನವನ್ನು ಏರ್ಪಡಿಸಲಾಗಿದೆ. ಕಾಸರಗೋಡು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಗಾಯಕರು ಏಕಕಂಠ ಗಾಯನದಲ್ಲಿ ಜೊತೆಗೂಡಿ ಭಾಗವಹಿಸಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries