ಕಾಸರಗೋಡು: ರಾಜ್ಯದ 31 ಸ್ಥಳೀಯಾಡಳಿತ ವಾರ್ಡ್‍ಗಳ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ನವೀಕರಿಸುತ್ತಿದ್ದು, ರಾಜ್ಯವು ಜನವರಿ 3 ರಂದು ಕರಡು ಮತದಾರರ ಪಟ್ಟಿಯನ್ನು ಮತ್ತು ಜನವರಿ 28 ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.
ಈ ಬಗ್ಗೆ ಚುನಾವಣಾ ಆಯುಕ್ತ ಎ.ಶಹಜಹಾನ್ ಮಾಹಿತಿ ನೀಡಿದ್ದಾರೆ. ಚುನಾಯಿತ ಸದಸ್ಯರ ಸಾವು, ರಾಜೀನಾಮೆ ಅಥವಾ ಅನರ್ಹತೆಯಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿಮಾಡಲು ಉಪಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯನ್ನು ನವೀಕರಿಸಲಾಗುತ್ತಿದೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಜನವರಿ 18ರವರೆಗೆ ಅರ್ಜಿ ಸಲ್ಲಿಸಬಹುದು. ಜನವರಿ 1, 2025 ರಂದು ಅಥವಾ ಅದಕ್ಕೂ ಮೊದಲು 18 ವರ್ಷ ಪೂರ್ಣಗೊಳಿಸಿದವರು ನೋಂದಾಯಿಸಲು ಅರ್ಹರಾಗಿರುತ್ತಾರೆ. ಅದಕ್ಕಾಗಿ ಆನ್‍ಲೈನ್‍ನಲ್ಲಿ www.sec.kerala.gov.in ಎಂಬ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ ಮತ್ತು ವರ್ಗಾವಣೆಗಾಗಿ ಅರ್ಜಿಗಳನ್ನು ಆನ್‍ಲೈನ್ ಅಥವಾ ಅಂಚೆ ಮೂಲಕ ಚುನಾವಣಾ ನೋಂದಣಿ ಕಚೇರಿಗೆ ಸಲ್ಲಿಸಬೇಕು.
ಮಹಾನಗರಪಾಲಿಕೆಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯಿತಿ, ನಗರಸಭೆಗಳಲ್ಲಿ ಆಯಾ ಕಾರ್ಯದರ್ಶಿಗಳು ಚುನಾವಣಾ ನೋಂದವಣಾಧಿಕಾರಿಯಾಗಿರುತ್ತಾರೆ.
ಆಯಾ ಸ್ಥಳೀಯಾಡಳಿತ ಸಂಸ್ಥೆಗಳು, ತಾಲೂಕು ಕಚೇರಿಗಳು ಮತ್ತು ಗ್ರಾಮ ಕಚೇರಿಗಳಲ್ಲಿ ಆಯೋಗದ ಕರಡು ಪಟ್ಟಿಕರಡು ಪಟ್ಟಿಯನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳು, ತಾಲೂಕು ಕಚೇರಿಗಳು, ಗ್ರಾಮ ಕಚೇರಿಗಳು ಮತ್ತು ಆಯೋಗದ ವೆಬ್‍ಸೈಟ್ seಛಿ.ಞeಡಿಚಿಟಚಿ.gov.iಟಿ ನಲ್ಲಿ ಪ್ರಕಟಿಸಲಾಗುವುದು. ವಯನಾಡ್ ಹೊರತುಪಡಿಸಿ 13 ಜಿಲ್ಲೆಗಳಲ್ಲಿ ಕಾಪೆರ್Çರೇಷನ್ ವಾರ್ಡ್, ಎರಡು ಬ್ಲಾಕ್ ಪಂಚಾಯಿತಿ ವಾರ್ಡ್, ಮೂರು ನಗರಸಭೆ ವಾರ್ಡ್ ಮತ್ತು 25 ಗ್ರಾಮ ಪಂಚಾಯಿತಿ ವಾರ್ಡ್‍ಗಳಲ್ಲಿ ಜನಪ್ರತಿನಿಧಿಗಳ ಸ್ಥಾನ ತೆರವಾಗಿದೆ.
ಕಾಸರಗೋಡು ಜಿಲ್ಲೆಯ ಮಡಿಕೈ ಗ್ರಾಮ ಪಂಚಾಯಿತಿಯ 8ನೇ ವಾರ್ಡು ಕೋಳಿಕುನ್ನು, ಕೋಡೋಂ ಬೇಲೂರು ಗ್ರಾಮ ಪಂಚಾಯಿತಿಯ 5ನೇ ವಾರ್ಡ್ ಅಯರೋಟ್ ವಾರ್ಡ್ ಮತ್ತು ಕಯ್ಯೂರು ಚಿಮೇನಿ ಗ್ರಾಮ ಪಂಚಾಯಿತಿಯ 7ನೇ ವಾರ್ಡ್ ಪಲ್ಲಿಪಾರದಲ್ಲಿ ಉಪಚುನಾವಣೆ ನಡೆಯುತ್ತಿದೆ.