ನಾರಾಯಣಪುರ: ಏಳು ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿ ನಕ್ಸಲರು ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ ಶರಣಾಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರು ಮಾವೋವಾದಿ ಕುತುಲ್ ಪ್ರದೇಶ ಸಮಿತಿಗೆ ಸೇರಿದ ಕಾರ್ಯಕರ್ತರು. ಪೋಲೀಸ್, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಪೊಳ್ಳು ಮಾವೋವಾದಿ ಸಿದ್ಧಾಂತದಿಂದ ನಿರಾಶೆ ಅನುಭವಿಸಿ ಮತ್ತು ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಇವರು ಶರಣಾಗಿದ್ದಾರೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ನಾರಾಯಣಪುರದ ಮಾಡ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿದ್ದು, ಭವಿಷ್ಯದಲ್ಲಿ ಜನಸಾಮಾನ್ಯರಂತೆ ಜೀವನ ನಡೆಸಲು ಬಯಸುವುದಾಗಿ ಅವರು ಹೇಳಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಶರಣಾದ ಕಾರ್ಯಕರ್ತರು ಜನತಾನ ಸರ್ಕಾರ್, ಮಿಲಿಷಿಯಾ, ಚೇತನ ನಾಟ್ಯ ಮಂಡಳಿ (ಸಿಎನ್‌ಎಂ - ಮಾವೋವಾದಿಗಳ ಸಾಂಸ್ಕೃತಿಕ ವಿಭಾಗ) ಮತ್ತು ಮಾವೋವಾದಿಗಳ ಕೆಳ ಹಂತದ ಸದಸ್ಯರಾಗಿ ಸಕ್ರಿಯರಾಗಿದ್ದರು. ಇವರ ಶರಣಾಗತಿ ಭದ್ರತಾ ಪಡೆಗಳಿಗೆ ಪ್ರಮುಖ ಯಶಸ್ಸು ಎಂದು ಎಸ್‌ಪಿ ಹೇಳಿದ್ದಾರೆ.
ಇದರೊಂದಿಗೆ 2022r ಜನವರಿಯಿಂದ ಜಿಲ್ಲೆಯಲ್ಲಿ ಒಟ್ಟು 71 ನಕ್ಸಲರು ಶರಣಾದಂತಾಗಿದೆ.