HEALTH TIPS

ಭಾರತದಲ್ಲಿ ಉನ್ನತ ಶಿಕ್ಷಣ: ವಿದೇಶಿ ವಿದ್ಯಾರ್ಥಿಗಳಿಗಾಗಿ 2 'ವಿಶೇಷ ವರ್ಗ' ವೀಸಾ

 ವದೆಹಲಿ: ದೇಶದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಎರಡು ವಿಶೇಷ ವರ್ಗದ ವೀಸಾ ಆರಂಭಿಸಿದೆ.

'ಇ-ವಿದ್ಯಾರ್ಥಿ ವೀಸಾ' ಹಾಗೂ 'ಇ-ವಿದ್ಯಾರ್ಥಿ-ಎಕ್ಸ್‌' ಎಂಬ ವೀಸಾಗಳನ್ನು ಕೇಂದ್ರ ಗೃಹ ಸಚಿವಾಲಯ ಪರಿಚಯಿಸಿದ್ದು, ಈ ವೀಸಾಗಳನ್ನು ಪಡೆಯಲು ಅಭ್ಯರ್ಥಿಗಳು 'ಸ್ಟಡಿ ಇನ್‌ ಇಂಡಿಯಾ' (ಎಸ್‌ಐಐ) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಸ್‌ಐಐ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಅರ್ಹ ವಿದೇಶಿ ವಿದ್ಯಾರ್ಥಿಗಳು 'ಇ-ವಿದ್ಯಾರ್ಥಿ ವೀಸಾ' ಸೌಲಭ್ಯ ಪಡೆಯಬಹುದು. 'ಇ-ವಿದ್ಯಾರ್ಥಿ ವೀಸಾ' ಹೊಂದಿರುವವರ ಅವಲಂಬಿತರಿಗೆ 'ಇ-ವಿದ್ಯಾರ್ಥಿ-ಎಕ್ಸ್‌' ವೀಸಾ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯಾರ್ಥಿಗಳು ವೀಸಾಕ್ಕಾಗಿ https://indianvisaonline.gov.in/ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಅಭ್ಯರ್ಥಿಗಳ ಅರ್ಜಿಗಳ ದೃಢೀಕರಣವು 'ಎಸ್‌ಐಐ ಐ.ಡಿ' ಮೂಲಕವೇ ನಡೆಯಲಿದೆ. ಹೀಗಾಗಿ, ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವವರು ಎಸ್‌ಐಐ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries