ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ 109 ನೇ ಸಂಸ್ಥಾಪನಾ ದಿನಾಚರಣೆ ಜ. 3ರಿಂದ 5ರ ವರೆಗೆ ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐ ಕ್ಯಾಂಪಸ್‍ನಲ್ಲಿ ಜರುಗಜರುಗಲಿದ್ದು, ಈ ಸಂದರ್ಭ 'ಸುಸ್ಥಿರ ಅಭಿವೃದ್ಧಿ ಗುರಿಗಾಗಿ ತೋಟಗಾರಿಕಾ ವಲಯವನ್ನು ಬಳಸಿಕೊಲ್ಳುವುದು'ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕೃಷ್ಯುತ್ಪನ್ನಗಳ ಪ್ರದರ್ಶನ ನಡೆಯಲಿರುವುದಾಗಿ ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಜ. 3ರಂದು ಬೆಳಗ್ಗೆ 10ಕ್ಕೆ ಐಸಿಎಆರ್ ಮಹಾನಿರ್ದೇಶಕ ಮತ್ತು ಡಿಎಆರ್‍ಇ ಕಾರ್ಯದರ್ಶಿ ಡಾ ಹಿಮಾಂಶು ಪಾಠಕ್ ಸಮಾರಂಭ ಉದ್ಘಾಟಿಸುವರು. ಇದಕ್ಕೂ ಮೊದಲು ಕ್ಯಾಂಪಸ್‍ನೊಳಗೆ ನೂತನವಾಗಿ ನಿರ್ಮಿಸಲಿರುವ ಕೆ.ವಿ.ಕೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ, ಮಲ್ಟಿ ಯೂಟಿಲಿಟಿ ಹಬ್, ಭಾರತರತ್ನ ಎಂ.ಎಸ್ ಸ್ವಾಮಿನಾಥನ್ ಸಮಿತಿ ಕೊಠಡಿ ಉದ್ಘಾಟನೆ, ಸೋಲಾರ್ ಗ್ರಿಡ್‍ನ ಕಮಿಶನಿಂಗ್, ಫೀಲ್ಡ್ ವಿಸಿಟ್ ನಡೆಯಲಿದೆ. ಸಭೆಯಲ್ಲಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಕೃಷಿ ಉದ್ಯಮಿಗಳು, ವಿವಿಧ ರಾಜ್ಯಗಳ ಅಭಿವೃದ್ಧಿ ಏಜೆನ್ಸಿಗಳ ಅಧಿಕಾರಿಗಳು, ಎಫ್‍ಪಿಒಗಳು, ರೈತರು ಮತ್ತು ಇತರ ಮಧ್ಯವರ್ತಿಗಳು ಪಾಲ್ಗೊಳ್ಳುವರು.
ಸೆಮಿನಾರ್‍ನಲ್ಲಿ ಕೃಷಿಯಲ್ಲಿನ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳಿಂದ ಮಾತುಕತೆ, ಪ್ಯಾನಲ್ ಚರ್ಚೆ, ಇಂಟರ್‍ಫೇಸ್, ಮೌಖಿಕ ಮತ್ತು ಪೆÇೀಸ್ಟರ್ ಪ್ರಸ್ತುತಿ, ಕೃಷ್ಯುತ್ಪನ್ನ ಪ್ರದರ್ಶನ, ಕ್ಷೇತ್ರ ಸಂದರ್ಶನ ಮತ್ತು ಯುವ ಸಂಶೋಧಕರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.
ಐಸಿಎಆರ್ ಸಂಸ್ಥೆಗಳು, ಕೆವಿಕೆಗಳು, ಅಭಿವೃದ್ಧಿ ಏಜೆನ್ಸಿಗಳು, ಯಶಸ್ವಿ ಉದ್ಯಮಿಗಳ ಉತ್ಪನ್ನಗಳು, ಸ್ವ-ಸಹಾಯ ಗುಂಪುಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಭವ್ಯ ಪ್ರದರ್ಶನ ಸಾರ್ವಜನಿಕರಿಗಾಗಿ ನಡೆಯಲಿದೆ. ಇವುಗಳಲ್ಲಿ ಗೇರು ಕೃಷಿಯಲ್ಲಿ ತಂತ್ರಜ್ಞಾನ(ಡಿಸಿಆರ್ ಪುತ್ತೂರು), ಮಸಾಲೆಗಳು (ಐಐಎಸ್‍ಆರ್ ಕೋಯಿಕ್ಕೋಡ್), ಗಡ್ಡೆ ಬೆಳೆಗಳು ( ಸಿಟಿಸಿಆರ್‍ಐ ತಿರುವನಂತಪುರ), ತಾಳೆ ಎಣ್ಣೆ (ಐಐಎಚಾರ್ ಬೆಂಗಳೂರು), ಮೀನುಗಾರಿಕೆ(ಸಿಎಂಎಫ್‍ಆರ್‍ಐ-ಸಿಐಎಫ್‍ಟಿ ಕೊಚ್ಚಿ), ರಬ್ಬರ್(ಆರ್‍ಆರ್‍ಐಐ ಕೋಟ್ಟಾಯಂ), ಪೆಡವೇಗಿ), ಎಣ್ಣೆ ಬೀಜಗಳು (ಐಐಓಆರ್ ಹೈದರಾಬಾದ್), ಹಣ್ಣುಗಳು ಮತ್ತು ತರಕಾರಿ (ಐಐಎಚ್‍ಆರ್ ಬೆಂಗಳೂರು)ಮತ್ತು ಕಾಫಿ (ಸಿಸಿಆರ್‍ಐ ಬಾಳೆಹೊನ್ನೂರು) ಸ್ಥಳೀಯರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳ ಜೊತೆಗೆ ಆಹಾರ ಪದಾರ್ಥಗಳು, ಬೀಜಗಳು, ನರ್ಸರಿ ಸಸಿಗಳು, ಜೈವಿಕ ಗೊಬ್ಬರಗಳು, ನೀರಾವರಿ ಮತ್ತು ಕೃಷಿ ಉಪಕರಣಗಳು, ಕರಕುಶಲ ವಸ್ತುಗಳು, ಕೃಷಿ ಹಣಕಾಸು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶನ ಸ್ಥಳದಲ್ಲಿ ತೆಂಗು ಯಾ ಅಡಿಕೆ ಕೃಷಿ ನಡೆಸುವ ವಿಧಾನ, ಮೌಲ್ಯವರ್ಧಿತ ಉತ್ಪನ್ನ ಮತ್ತು ಚಾಕೊಲೇಟ್ ತಯಾರಿಕೆಯ ಬಗ್ಗೆ ತರಬೇತಿಯನ್ನು ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಸಿಪಿಸಿಆರ್‍ಐ ಬೆಳೆ ಅಬಿವೃದ್ಧಿ ವಿಭಾಗ ಮುಖ್ಯಸ್ಥೆ ಡಾ.ವಿ. ನಿರಾಲ್, ಹಿರಿಯ ವಿಜ್ಞಾನಿ ಸಿ. ತಂಬಾನ್, ಶ್ಯಾಮ ಪ್ರಸಾದ್ ಕುಂಚಿನಡ್ಕ ಉಪಸ್ಥಿತರಿದ್ದರು.