ಕುಂಬಳೆ: ಶಬರಿಮಲೆ ಮಂಡಲ ಉತ್ಸವ ನಲವತ್ತೊಂದು ದಿನಗಳು ಪೂರ್ಣಗೊಂಡಾಗ 32,49,756 ಭಕ್ತರು ಭೇಟಿ ನೀಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು. ಕಳೆದ ವರ್ಷ ಇದೇ ವೇಳೆಗೆ 28,42,447 ಮಂದಿ ಭಕ್ತರು ದರ್ಶನ ಪಡೆದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 4,07,309 ಭಕ್ತರು ಹೆಚ್ಚಳವಾಗಿದೆ. 5,66,571 ಭಕ್ತರು ನೈಜ ಸಮಯದ ಆನ್‍ಲೈನ್ ಬುಕಿಂಗ್ ಮೂಲಕ ಸನ್ನಿಧಾನಂ ತಲುಪಿದ್ದಾರೆ. ಕಳೆದ ವರ್ಷ 4,02,269 ಮಂದಿ ಭಕ್ತರು ಸ್ಪಾಟ್ ಬುಕ್ಕಿಂಗ್ ಮೂಲಕ ಭೇಟಿ ನೀಡಿದ್ದರು. 74,774 ಭಕ್ತರು ಕಾಲ್ನಡಿಗೆ ಮೂಲಕ ದರ್ಶನ ಪಡೆದರು. ಕಳೆದ ವರ್ಷ 69,250 ಭಕ್ತರು ಪುಲ್ಮೇಡು ಮೂಲಕ ಸನ್ನಿಧಾನಂ ತಲುಪಿದ್ದರು.
41 ದಿನಗಳ ಮಂಡಲ ಯಾತ್ರೆ ಮುಗಿದಾಗ ಆದಾಯವೂ ಹೆಚ್ಚಿದೆ. 2,97,06,67,679 ರೂ.ಆದಾಯ ಗಳಿಸಲಾಗಿದೆ. ಕಳೆದ ವರ್ಷ ಶಬರಿಮಲೆ ಮಂಡಲ ಯಾತ್ರೆಯ ಒಟ್ಟು ಆದಾಯ ರೂ.2,14,82,87,898 ರೂ.ಆಗಿತ್ತು. ಈ ಬಾರಿ 82,23,79,781 ಏರಿಕೆಯಾಗಿದೆ.
ಕಳೆದ ವರ್ಷ ರೂ.1,01,95,71,41 ರೂ.ಆದಾಯ ಪಡೆಯಲಾಗಿದೆ. ರೂ.22,06,59,540 ರೂ. ಹೆಚ್ಚುವರಿಯಾಗಿ ಪಡೆದಿದ್ದು, ರೂ.80,25,74,567. ಈ ವರ್ಷ ರೂ.13,28,45,705/- ಹೆಚ್ಚಳವಾಗಿದೆ.
ಪಂಪಾ ತಟಾಕದಲ್ಲಿ ಶುಕ್ರವಾರ ಮುಂಜಾನೆ ಕಂಡ ದೃಶ್ಯ.