ನವದೆಹಲಿ: ಕೇಂದ್ರ ಸರ್ಕಾರವು ಜನವರಿ ತಿಂಗಳ ತೆರಿಗೆ ಪಾಲಾಗಿ ರಾಜ್ಯಗಳಿಗೆ 1,73,030 ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಘೋಷಿಸಿದ್ದರು.
ಇದು ಡಿಸೆಂಬರ್‍ನಲ್ಲಿ ನೀಡಿದ್ದಕ್ಕಿಂತ ದುಪ್ಪಟ್ಟಾಗಿದೆ. ಹೆಚ್ಚುವರಿ ಹಣವು ರಾಜ್ಯಗಳ ಬಂಡವಾಳ ವೆಚ್ಚ ಮತ್ತು ಇತರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಅನುμÁ್ಠನಕ್ಕೆ ಬಳಕೆಯಾಗುತ್ತದೆ. ಕೇರಳಕ್ಕೆ 3,330.83 ಕೋಟಿ ರೂ.ಲಭಿಸಿದೆ.
ಬಿಹಾರಕ್ಕೆ 17,403 ಕೋಟಿ ರೂ., ಯುಪಿಗೆ 31,039 ಕೋಟಿ ರೂ. ಮತ್ತು ಬಂಗಾಳಕ್ಕೆ 13,017 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಇತರ ರಾಜ್ಯಗಳೆಂದರೆ ಮಧ್ಯಪ್ರದೇಶ (13,530 ಕೋಟಿ), ಮಹಾರಾಷ್ಟ್ರ (10,930), ರಾಜಸ್ಥಾನ (10,426), ಕರ್ನಾಟಕ (6,310), ಒಡಿಶಾ (7,835), ಪಂಜಾಬ್ (3,126), ತಮಿಳುನಾಡು (7,057), ತೆಲಂಗಾಣ (3,637) ಮತ್ತು ಆಂಧ್ರಪ್ರದೇಶ (7,002).