HEALTH TIPS

ವಿಶ್ವದಾದ್ಯಂತ ಜೆನ್‌ ಬೀಟಾಪೀಳಿಗೆ ಯುಗಾರಾಂಭ! ಹೊಸ ವರ್ಷದ ಮೊದಲ ದಿನ 3 ಲಕ್ಷ ಮಕ್ಕಳ ಜನನ

ನವದೆಹಲಿ: ಜಗತ್ತಿನಲ್ಲಿ ಈಗ “ಜೆನ್‌ ಬೀಟಾ’ ಯುಗ ಆರಂಭವಾಗಿದೆ. 2025ರ ಜ. 1ರಿಂದ 2039ರ ಕೊನೆಯವರೆಗೆ ಜನಿಸುವ ಮಕ್ಕಳನ್ನು ಬೀಟಾ ಪೀಳಿಗೆ ಎಂದು ಸಮಾಜಶಾಸ್ತ್ರಜ್ಞರು ವ್ಯಾಖ್ಯಾನಿಸಿದ್ದು, ಹೊಸ ವರ್ಷದ ಮೊದಲ ದಿನವೇ ಹೊಸ ಪೀಳಿಗೆ ಆರಂಭವಾದ ವರದಿಗಳು ಬಂದಿವೆ.

ಒಂದೇ ದಿನ ವಿಶ್ವದಲ್ಲಿ 3 ಲಕ್ಷಕ್ಕೂ ಅಧಿಕ ಮಕ್ಕಳು ಜನಿಸಿದ್ದಾರೆ ಎಂದು ವಲ್ಡೋìಮೀಟರ್‌ ಅಂಕಿ-ಅಂಶಗಳು ತಿಳಿಸಿವೆ.

ಮಲೇಶ್ಯಾದಲ್ಲಂತೂ ಒಂದೇ ದಿನ ಹೊಸ ಪೀಳಿಗೆಯ 55 ಮಕ್ಕಳು ಜನಿಸಿರುವುದಾಗಿ ಅಲ್ಲಿನ ಮಲೆಮೈಲ್‌ ಮಾಧ್ಯಮ ಹೇಳಿಕೊಂಡಿದೆ.ಹಾಂಕಾಂಗ್‌ನಲ್ಲಿ 4, ವಿಯೆಟ್ನಾಂನಲ್ಲಿ 15, ಆಸ್ಟ್ರೇಲಿಯಾದಲ್ಲಿ 30, ಯುಎಇಯಲ್ಲಿ 20 ಸೇರಿದಂತೆ ಹಲವು ದೇಶಗಳ ಮಾಧ್ಯಮಗಳು ಹೊಸ ಪೀಳಿಗೆಯ ಮಕ್ಕಳ ಜನನದ ಮಾಹಿತಿ ನೀಡಿವೆ. ಹೊಸ ಪೀಳಿಗೆಯ ಮಕ್ಕಳನ್ನು ಅವರ ಪೋಷಕರು ಹಾಗೂ ಆಸ್ಪತ್ರೆಯ ಸಿಬಂದಿ ಹೊಸ ವರ್ಷವನ್ನು ಸ್ವಾಗತಿಸುವಷ್ಟೇ ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಏನಿದು ಜೆನ್‌ ಬೀಟಾ ಸಂತತಿ?
2025ರ ಜನವರಿ 1ರಿಂದ 2039ರ ಡಿಸೆಂಬರ್‌ 31ರ ವರೆಗೆ ಜನಿಸುವ ಮಕ್ಕಳನ್ನು ಜೆನ್‌ ಬೀಟಾ ಎಂದು ಕರೆಯಲಾಗುತ್ತದೆ. 1925ರಿಂದ ಈ ತಲೆಮಾರು ಲೆಕ್ಕಚಾರವನ್ನು ಆರಂಭಿಸಲಾಗಿದ್ದು, 1925-45ರ ವರೆಗೆ ತಲೆಮಾರನ್ನು “ಬಿಲ್ಡರ್‌’, 1946- 64ರ ವರೆಗಿನ ತಲೆಮಾರನ್ನು “ಬೂಮರ್’, ಬಳಿಕ 1965-80 “ಜೆನ್‌-ಎಕ್ಸ್‌’, 1981-1994 “ಜೆನ್‌-ವೈ’, 1995-2009 “ಜೆನ್‌-ಝಡ್‌’, 2010-2024ರ ನಡುವಿನ ತಲೆಮಾರನ್ನು “ಜೆನ್‌ ಆಲ್ಫಾ’ ಎಂದು ಗುರುತಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries