HEALTH TIPS

ಬಿಡುಗಡೆ ಮಾಡಲಿರುವ 3 ಮಹಿಳಾ ಒತ್ತೆಯಾಳುಗಳ ಹೆಸರನ್ನು ಇಸ್ರೇಲ್‌ಗೆ ನೀಡಿದ ಹಮಾಸ್

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ವಿರಾಮ ಪ್ರಕ್ರಿಯೆ ವಿಳಂಬವಾಗಿರುವ ನಡುವೆಯೇ ಇಂದು ಬಿಡುಗಡೆ ಮಾಡಲು ಉದ್ದೇಶಿಸಿರುವ ಇಸ್ರೇಲ್‌ನ ಮೂವರು ಒತ್ತೆಯಾಳುಗಳ ಹೆಸರುಗಳನ್ನು ಹಮಾಸ್ ಬಿಡುಗಡೆ ಮಾಡಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಇಸ್ರೇಲ್ ಅಧಿಕಾರಿಗಳು, ಬಿಡುಗಡೆ ಮಾಡಲು ಉದ್ದೇಶಿಸಿರುವ ಮೂವರು ಮಹಿಳಾ ಒತ್ತೆಯಾಳುಗಳ ಹೆಸರನ್ನು ಹಮಾಸ್ ನಮಗೆ ನೀಡಿದೆ ಎಂದು ತಿಳಿಸಿದ್ದಾರೆ.

ಗಾಜಾ ಯುದ್ಧ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಭಾಗವಾಗಿ ಹಮಾಸ್‌ನಿಂದ ಮೂರು ಹೆಸರುಗಳನ್ನು ನಮಗೆ ತಲುಪಿಸಲಾಗಿದೆ ಎಂದು ಮಧ್ಯವರ್ತಿಗಳು ಇಸ್ರೇಲ್‌ಗೆ ತಿಳಿಸಿದ್ದರು. ಆದರೆ, ಒತ್ತೆಯಾಳುಗಳ ಹೆಸರು ನಮಗೆ ತಲುಪದ ಹೊರತು ಯುದ್ಧ ಮುಂದುವರಿಸುವುದಾಗಿ ಇಸ್ರೇಲ್ ಹೇಳಿತ್ತು.

ಈ ಬಗ್ಗೆ ಪ್ರತಿಯಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಂದು ಜಾರಿಯಾಗಬೇಕಿದ್ದ ಕದನ ವಿರಾಮವು ಇಸ್ರೇಲ್ ಒತ್ತೆಯಾಳುಗಳ ಪಟ್ಟಿ ಸ್ವೀಕರಿಸುವವರೆಗೆ ಜಾರಿಯಾಗುವುದಿಲ್ಲ ಎಂದು ಹೇಳಿದ್ದರು.

ವಿಳಂಬವಾದ ಕದನ ವಿರಾಮ ಜಾರಿ

ಅಮೆರಿಕ, ಕತಾರ್ ಸೇರಿದಂತೆ ಹಲವು ರಾಷ್ಟ್ರಗಳ ಬಹಳ ದಿನಗಳ ಮಧ್ಯಸ್ಥಿಕೆ ಮಾತುಕತೆ ಬಳಿಕ ಇತ್ತೀಚೆಗೆ ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಗೆ ಸೂಚಿಸಿದ್ದವು.

ಕದನ ವಿರಾಮ ಘೋಷಿಸಲು ಇಸ್ರೇಲ್‌ ಸೇನೆ ಮತ್ತು ಹಮಾಸ್ ಬಂಡುಕೋರರ ಸಂಘಟನೆ ಶನಿವಾರ ಸಮ್ಮತಿಸಿದ್ದವು. ಇದರನ್ವಯ, ಸ್ಥಳೀಯ ಕಾಲಮಾನ ಭಾನುವಾರ ಬೆಳಿಗ್ಗೆ 6.30ರಿಂದ (ಭಾರತೀಯ ಕಾಲಮಾನ ಶನಿವಾರ ರಾತ್ರಿ 12ಗಂಟೆ) ಜಾರಿಗೆ ಬರಬೇಕಿತ್ತು. ಹಮಾಸ್ ಒತ್ತೆಯಾಳುಗಳ ಪಟ್ಟಿ ನೀಡದ ಹಿನ್ನೆಲೆ ಕೊಂಚ ತಡವಾಗಿದೆ.

ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಕುರಿತು ಉಭಯತ್ರರ ನಡುವೆ ಮೂಡಿದ್ದ ಒಡಂಬಡಿಕೆಗೆ ಇಸ್ರೇಲ್‌ನ ಸಚಿವ ಸಂಪುಟವು ಅನುಮೋದನೆ ನೀಡಿತ್ತು.

ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಅವಧಿ ನಡೆದ ಭೀಕರ, ಗಂಭೀರ ಸ್ವರೂಪದ ಯುದ್ಧವು, 15 ತಿಂಗಳ ತರುವಾಯ ತಾತ್ಕಾಲಿಕವಾಗಿ ಅಂತ್ಯಗೊಂಡಂತಾಗಿದೆ.

ಒಡಂಬಡಿಕೆಯ ಪ್ರಕಾರ, ಹಮಾಸ್ ಬಂಡುಕೋರರು ಮುಂದಿನ ಆರು ವಾರಗಳಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವರು. ಪ್ರತಿಯಾಗಿ, ಇಸ್ರೇಲ್‌ ಸೇನೆಯು ತಾನು ಸೆರೆ ಇಟ್ಟುಕೊಂಡಿರುವ ಪ್ಯಾಲೆಸ್ಟೀನ್‌ನ ನೂರಾರು ಯುದ್ಧ ಕೈದಿಗಳ ಬಿಡುಗಡೆ ಮಾಡಲಿದೆ.

ಉಳಿದಂತೆ, ಪುರುಷ ಕೈದಿಗಳು ಎರಡನೇ ಹಂತದಲ್ಲಿ ಬಿಡುಗಡೆ ಆಗುವರು. ಈ ಕುರಿತು ಮೊದಲ ಹಂತದ ಬಿಡುಗಡೆ ಬಳಿಕ ಮಾತುಕತೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries