ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ 'ಬಲೂಚಿಸ್ತಾನ್ ಲಿಬರೇಶನ್ ಆರ್ಮಿ' ಶನಿವಾರ ಬಸ್ ಒಂದರ ಮೇಲೆ ದಾಳಿ ನಡೆಸಿದ್ದು, 4 ಮಂದಿ ಸಾವಿಗೀಡಾಗಿ, 32 ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನ: ತೆಹ್ರೀಕ್-ಎ-ತಾಲಿಬಾನ್ ಜತೆ ನಂಟು ಹೊಂದಿದ್ದ 13 ಭಯೋತ್ಪಾದಕರ ಹತ್ಯೆ
ಕರಾಚಿಯಿಂದ ತುರ್ಬಟ್‌ಗೆ ತೆರಳುದ್ದಿದ್ದ ಬಸ್ ಬಹಮನ್ ಪ್ರದೇಶಕ್ಕೆ ತಲುಪಿದಾಗ ಕಚ್ಚಾ ಬಾಂಬ್ ಸ್ಫೋಟಿಸಲಾಗಿದೆ.
ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ. ಆ ಬಸ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಎಸ್‌ಎಸ್‌ಪಿ ಝೊಹೈಬ್ ಮೊಹ್ಸಿನ್ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಹಾಗೂ ಅವರ ಕುಟುಂಬದವರನ್ನು ಗುರಿಯಾಗಿಸಿ ನಡೆದ ದಾಳಿಯೂ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.