HEALTH TIPS

ಸತತ 4 ವರ್ಷಗಳಿಂದ ಸಭೆಗೆ ಹಾಜರಾಗದ ಪಿಡಬ್ಲ್ಯುಡಿ ಅಧಿಕಾರಿಗೆ ಬಿತ್ತು ₹5 ದಂಡ!

Top Post Ad

Click to join Samarasasudhi Official Whatsapp Group

Qries

 ಹಮೀರ್‌ಪುರ: ಹಿಮಾಚಲ ಪ್ರದೇಶದ ತೌಣಿದೇವಿ ಮಂಡಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಸತತ ನಾಲ್ಕು ವರ್ಷಗಳಿಂದ ಪಂಚಾಯಿತಿ ಸಭೆಗಳಿಗೆ ಗೈರಾದ ಕಾರಣ ಅವರಿಗೆ ₹5 ದಂಡ ವಿಧಿಸಲಾಗಿದೆ. 'ಹಲವು ಬಾರಿ ಎಚ್ಚರಿಕೆ ನೀಡಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ.

ಇದರಿಂದ ಇಲಾಖಾ ಅಭಿವೃದ್ದಿ ಕಾಮಗಾರಿಗೆ ತೊಂದರೆಯಾಗುತ್ತಿದ್ದು, ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ನಿರ್ಣಯ ಕೈಗೊಂಡು ₹5 ದಂಡ ವಿಧಿಸಲಾಗಿದೆ' ಎಂದು ಹಮೀರ್‌ಪುರ ಪಂಚಾಯಿತಿ ಅಧ್ಯಕ್ಷ ಹರೀಶ್‌ ಶರ್ಮಾ ತಿಳಿಸಿದ್ದಾರೆ.

ಹರೀಶ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ 15ನೇ ಹಣಕಾಸು ಆಯೋಗದ ಬಜೆಟ್ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಡಬ್ಲ್ಯುಡಿ ಅಧಿಕಾರಿ ದೇವರಾಜ್, 'ಸಭೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ' ಎಂದಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries