ಇಸ್ಲಾಮಾಬಾದ್: ಸ್ಪೇನ್‌ಗೆ ತೆರಳಲು ಸುಮಾರು 80 ಮಂದಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿಯು ಮೊರೊಕ್ಕೊದಲ್ಲಿ ಮುಗುಚಿಕೊಂಡಿದ್ದು, ಕನಿಷ್ಠ 40 ಜನ ಪಾಕಿಸ್ತಾನಿಯರು ಮೃತಪಟ್ಟಿದ್ದಾರೆ.
ಕನಿಷ್ಠ 50 ಮಂದಿ ಮುಳುಗಿದ್ದರು. ರಕ್ಷಣಾ ಸಿಬ್ಬಂದಿ 36 ಜನರನ್ನು ರಕ್ಷಿಸಿದ್ದಾರೆ.
ದೋಣಿಯಲ್ಲಿ 80 ಜನ ವಲಸಿಗರಿದ್ದರು ಎಂದು ವಲಸಿಗರ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವ 'ಮೈಗ್ರೆಂಟ್ ರೈಟ್ಸ್ ಗ್ರೂಪ್ ವಾಕಿಂಗ್ ಬಾರ್ಡರ್ಸ್' ಸಂಸ್ಥೆಯ ಸಿಇಒ ಹೆಲೆನಾ ಮಲೆನೊ ಅವರು 'ಎಕ್ಸ್' ಮೂಲಕ ತಿಳಿಸಿದ್ದಾರೆ.
ನೀರಿನಲ್ಲಿ ಮುಳುಗಿದ್ದವರಲ್ಲಿ ಕನಿಷ್ಠ 44 ಮಂದಿ ಪಾಕಿಸ್ತಾನಿಯರು ಸೇರಿದ್ದಾರೆ. ಯಾರೊಬ್ಬರೂ ರಕ್ಷಣೆಗೆ ಧಾವಿಸದೆ, ಇವರಲ್ಲಿ ಹೆಚ್ಚಿನವರು 13 ದಿನ ಆತಂಕದಲ್ಲಿಯೇ ಗಡಿ ಭಾಗದಲ್ಲಿ ಕಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅವಘಡದಲ್ಲಿ ಬಾಧಿತರಾಗಿರುವ ಪಾಕಿಸ್ತಾನಿಯರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಸಂಬಂಧಿಸಿದ ಇಲಾಖೆಗಳಿಗೆ ಆದೇಶಿಸಿದ್ದಾರೆ.