ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. 4.75 ಲಕ್ಷ ಚದರ ಅಡಿ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಕುಂಭಮೇಳಕ್ಕೆ ಬರುವವರಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ.
22 ಎಕರೆ ಪ್ರದೇಶವನ್ನು ಕುಂಭಮೇಳದ ಸಿದ್ಧತೆಗೆ ಬಳಸಿಕೊಳ್ಳಲಾಗಿದ್ದು, 4.75 ಲಕ್ಷ ಚದರಡಿ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.
ಗುಜರಾತ್ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದು ಇದನ್ನು ನಿರ್ಮಾಣ ಮಾಡಲಾಗಿದೆ. ಮುಖ್ಯ ಪ್ರದೇಶಗಳಲ್ಲಿ 24 ಗಂಟೆ ಆಸ್ಪತ್ರೆ ಸೌಲಭ್ಯ, ಉಚಿತ ಭಂಡಾರ, ವಿಐಪಿ ಅತಿಥಿಗಳಿಗೆ ದತ್ತ ಸದನ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಇದೇ 13ರಂದು ಆರಂಭವಾಗಲಿರುವ ಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ.