ಕೀವ್: ಉಕ್ರೇನ್ ರಾಜಧಾನಿ ಕೀವ್ ಗುರಿಯಾಗಿಸಿ ರಷ್ಯಾ ಸೇನೆ ಶನಿವಾರ ಮುಂಜಾನೆ ಡ್ರೋನ್, ಕ್ಷಿಪಣಿಗಳ ದಾಳಿ ನಡೆಸಿದೆ. ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
'39 ಶಹೀದ್ ಡ್ರೋನ್, ನಾಲ್ಕು ಕ್ಷಿಪಣಿ ಪ್ರಯೋಗಿಸಲಾಗಿದೆ. ಈ ಪೈಕಿ 24 ಡ್ರೋನ್, ಎರಡು ಕ್ಷಿಪಣಿ ಹೊಡೆದುರುಳಿಸಲಾಗಿದೆ' ಎಂದು ಉಕ್ರೇನ್‌ನ ವಾಯುಪಡೆ ತಿಳಿಸಿದೆ.
ದಾಳಿಯಿಂದ ಶೆವ್‌ಚೆಂಕಿವ್‌ಸ್ಕಿ ಜಿಲ್ಲೆಯಲ್ಲಿ ಕಟ್ಟಡಗಳ ಕಿಟಕಿಗಳು ಹಾನಿಗೊಂಡಿವೆ. ದಟ್ಟ ಹೊಗೆ ಮೂಡಿತ್ತು. ನೀರು ಸರಬರಾಜು ಕೊಳವೆಗಳು, ಲುಕ್ಯಾನಿವ್‌ಸ್ಕಾ ಮೆಟ್ರೊ ನಿಲ್ದಾಣದ ಪ್ರವೇಶದ್ವಾರಕ್ಕೂ ಹಾನಿಯಾಗಿದೆ ಎಂದು ಮೇಯರ್ ವಿಟಾಲಿ ಕ್ಲಿಟ್ಸ್‌ಚ್ಕೊ ತಿಳಿಸಿದ್ದಾರೆ.