HEALTH TIPS

ಜನವರಿ ತಿಂಗಳ ಪಡಿತರ ವಿತರಣೆ ಫೆಬ್ರವರಿ 4 ರವರೆಗೆ ವಿಸ್ತರಣೆ

ತಿರುವನಂತಪುರಂ: ಜನವರಿ ತಿಂಗಳ ಪಡಿತರ ವಿತರಣೆಯನ್ನು ಫೆಬ್ರವರಿ 4 ರವರೆಗೆ ವಿಸ್ತರಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್ ಅನಿಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 5 ರಂದು ಮಾಸಾಂತ್ಯದ ದಾಸ್ತಾನು ಇರುವುದರಿಂದ ಪಡಿತರ ವ್ಯಾಪಾರಿಗಳಿಗೆ ರಜೆ ಇರುತ್ತದೆ. ಫೆಬ್ರವರಿ ತಿಂಗಳ ಪಡಿತರ ವಿತರಣೆ ಫೆಬ್ರವರಿ 6 ರಿಂದ ಆರಂಭವಾಗಲಿದೆ.

ಗುರುವಾರ ಸಂಜೆ 5 ಗಂಟೆಯ ಹೊತ್ತಿಗೆ, ಶೇ. 68.71 ರಷ್ಟು ಕಾರ್ಡುದಾರರು ತಮ್ಮ ಪಡಿತರವನ್ನು ಪಡೆದಿದ್ದಾರೆ. ಮೊನ್ನೆಯμÉ್ಟೀ 2,51,795 ಕಾರ್ಡ್‍ದಾರರು ಮತ್ತು ನಿನ್ನೆ (ಸಂಜೆ 5 ಗಂಟೆಯವರೆಗೆ) 2,23,048 ಕಾರ್ಡ್‍ದಾರರು ಪಡಿತರ ಪಡೆದಿದ್ದಾರೆ. ಸಾರಿಗೆ ಗುತ್ತಿಗೆದಾರರ ಮುಷ್ಕರದಿಂದಾಗಿ ಆಹಾರ ಧಾನ್ಯಗಳ ಮನೆ ಬಾಗಿಲಿಗೆ ವಿತರಣೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಯಿತು. ಆದರೆ ಕಳೆದ ಐದು ದಿನಗಳಿಂದ ಮನೆ ಬಾಗಿಲಿಗೆ ವಿತರಣೆ ಸರಾಗವಾಗಿ ನಡೆಯುತ್ತಿದೆ.

ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಸಾಕಷ್ಟು ದಾಸ್ತಾನು ಇದೆ. ಈ ಪರಿಸ್ಥಿತಿಯಲ್ಲಿ, ಜನವರಿ ತಿಂಗಳ ಪಡಿತರವನ್ನು ಪಡೆಯಲಿರುವ ಎಲ್ಲಾ ಕಾರ್ಡ್‍ದಾರರು ಫೆಬ್ರವರಿ 4 ರ ಮೊದಲು ತಮ್ಮ ಪಡಿತರವನ್ನು ಪಡೆಯಬೇಕು ಎಂದು ಸಚಿವರು ತಿಳಿಸಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries