ತಿರುವನಂತಪುರಂ: ಜಿಮ್‍ಗಳಲ್ಲಿ ಅಕ್ರಮ ಔಷಧಿಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ದುರುಪಯೋಗವನ್ನು ತಡೆಗಟ್ಟಲು ರಾಜ್ಯ ಔಷಧ ನಿಯಂತ್ರಣ ಇಲಾಖೆಯು ರಾಜ್ಯಾದ್ಯಂತ ವಿಶೇಷ ತಪಾಸಣೆಗಳನ್ನು ನಡೆಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ರಾಜ್ಯದ 50 ಜಿಮ್‍ಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಸುಮಾರು 1.5 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸೆಂಬರ್‍ನಲ್ಲಿ ದೇಹದಾಢ್ರ್ಯ ಸ್ಪರ್ಧೆಗಳ ಭಾಗವಾಗಿ ಜಿಮ್‍ಗಳಲ್ಲಿ ಗ್ರಾಹಕರಿಗೆ ಡೋಪಿಂಗ್ ಔಷಧಿಗಳನ್ನು ಅಕ್ರಮವಾಗಿ ವಿತರಿಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿಯ ಆಧಾರದ ಮೇಲೆ ಔಷಧ ನಿಯಂತ್ರಣ ಇಲಾಖೆ ತಪಾಸಣೆ ನಡೆಸಿತು. ಈ ಜಿಮ್‍ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಜಿಮ್‍ಗಳಿಂದ ವಶಪಡಿಸಿಕೊಂಡ ಔಷಧಿಗಳಲ್ಲಿ ಹಲವು ರೋಗಗಳಿಗೆ ಬಳಸುವ ಔಷಧಿಗಳು ಸೇರಿವೆ. ತ್ರಿಶೂರ್‍ನ ಜಿಮ್ ತರಬೇತುದಾರರೊಬ್ಬರ ಮನೆಯಿಂದ ದೊಡ್ಡ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಔಷಧಿಗಳಲ್ಲಿ ಸ್ಟೀರಾಯ್ಡ್‍ಗಳು ಇದ್ದವು. ಜಿಮ್‍ಗಳ ಮೇಲೆ ಕೇಂದ್ರೀಕರಿಸಿ ತಪಾಸಣೆಗಳನ್ನು ತೀವ್ರಗೊಳಿಸಲು ಸಚಿವರು ಸೂಚನೆ ನೀಡಿದರು.