HEALTH TIPS

50 ವರ್ಷಗಳು, 250 ಪುಸ್ತಕಗಳು; ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈಯವರ ಸುವರ್ಣ ಮಹೋತ್ಸವ-ಕೃತಿ ಬಿಡುಗಡೆ

Top Post Ad

Click to join Samarasasudhi Official Whatsapp Group

Qries

ಕೋಝಿಕ್ಕೋಡ್: ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ಬರವಣಿಗೆಯ ಸುವರ್ಣ ಮಹೋತ್ಸವಕ್ಕೆ ಸಾಹಿತ್ಯ ನಗರಿ ಗೌರವ ಸಲ್ಲಿಸಿತು. ಕೋಝಿಕ್ಕೋಡ್‍ನಲ್ಲಿ ನಡೆದ ಸುವರ್ಣ ಮಹೋತ್ಸವ ಆಚರಣೆಯನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಿನ್ನೆ ಉದ್ಘಾಟಿಸಿದರು.

ರಾಜಕೀಯ ಮತ್ತು ಸಾಂಸ್ಕøತಿಕ ರಂಗದ ಅನೇಕ ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಇಂಡೋ-ಅರಬ್ ಕಾನ್ಫೆಡರೇಷನ್ ಕೌನ್ಸಿಲ್ ಆಯೋಜಿಸಿತ್ತು.

ಕಾರ್ಯನಿರತ ಜೀವನದ ನಡುವೆಯೂ 250 ಪುಸ್ತಕಗಳನ್ನು ಬರೆಯುವುದು ದೊಡ್ಡ ವಿಷÀಯವಾಗಿದ್ದು, ಅದಕ್ಕಾಗಿಯೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದರು. ಗೋವಾ ತನ್ನ ಜನ್ಮಸ್ಥಳ. ಈಗ ಕೇರಳ ಕರ್ಮಭೂಮಿಯಾಗಿದೆ. ಒಂದು ವರ್ಷದೊಳಗೆ,  ಮಲಯಾಳಂ ಕಲಿಯುವೆ. ಮತ್ತು ಮಲಯಾಳಂ ಮಾತನಾಡಲು ಸಾಧ್ಯವಾಗುತ್ತದೆ. ಎರಡೂ ರಾಜ್ಯಗಳು ಅನೇಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹೋಲಿಕೆಗಳನ್ನು ಹೊಂದಿವೆ ಎಂದು ಅರ್ಲೇಕರ್ ಗಮನಸೆಳೆದರು. ಅವರು ತಮ್ಮ ಆತ್ಮೀಯ ಸಹೋದರ ಸಹೋದರಿಯರನ್ನು ಮಲಯಾಳಂನಲ್ಲಿ ಉದ್ದೇಶಿಸಿ ಮಾತನಾಡುವ ಮೂಲಕ ತಮ್ಮ ಉದ್ಘಾಟನಾ ಭಾಷಣವನ್ನು ಪ್ರಾರಂಭಿಸಿದರು.

ಸಾರ್ವಜನಿಕ ಕ್ರಿಯೆ ಎಂದರೆ ಸಾಮಾನ್ಯ ಜನರೊಂದಿಗೆ ನಿಲ್ಲುವುದು ಎಂದು ನಾನು ನಂಬುತ್ತೇನೆ ಎಂದು ಅರ್ಲೇಕರ್ ಹೇಳಿದರು. ಯಾವುದೇ ಪಕ್ಷದ ಕಾರ್ಯಕರ್ತರಾಗಿರಲಿ, ಮಾನವೀಯತೆ ಬೇಕು. ಶ್ರೀಧರನ್ ಪಿಳ್ಳೈ ಅವರ ಬಳಿ ಅದಿದೆ. ಅವರು ಗೋವಾ ಮತ್ತು ಕೇರಳವನ್ನು ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿ. ಒಬ್ಬ ಒಳ್ಳೆಯ ರಾಜಕಾರಣಿಯಾಗಲು, ಮೊದಲು ಒಬ್ಬ ಒಳ್ಳೆಯ ಮನುಷ್ಯನಾಗಬೇಕು. ನೀವು ಒಳ್ಳೆಯ ವ್ಯಕ್ತಿಯಲ್ಲದಿದ್ದರೆ, ಸಮಾಜಕ್ಕೆ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಅರ್ಲೇಕರ್ ಹೇಳಿದರು.

ಸ್ವಾಮಿ ಚಿದಾನಂದಪುರಿ, ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಮತ್ತು ಬಸೇಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ ಟ್ರಿಟ್ರಿಯನ್ ಕ್ಯಾಥೊಲಿಕ್ ಬಾವಾ ಆಶೀರ್ವಚನ ನೀಡಿದರು. ಎಂ.ಪಿ. ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಕೆ. ಕೃಷ್ಣ ದಾಸ್, ಎಂ.ಕೆ. ರಾಘವನ್ ಎಂ.ಪಿ., ಪಿ.ವಿ. ಚಂದ್ರನ್, ಎನ್.ಕೆ. ಅಬ್ದುಲ್ ರೆಹಮಾನ್, ಆಟಕೋಯ ಪಲ್ಲಿಕಂಡಿ, ಎಂ.ವಿ. ಕುಂಞಮು ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ಟೀಕಿಸುವವರು ಮೂರ್ಖರು ಎಂದು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಟೀಕೆಗಳೂ ಬರಲಿವೆ. ಒ.ರಾಜಗೋಪಾಲ್ ಮರ್ಕಜ್‍ಗೆ ಬಂದಾಗ ದೊಡ್ಡ ಗದ್ದಲ ಉಂಟಾಯಿತು. ಈಗ ಎಲ್ಲಾ ಮುಗಿದಿದೆ ಎಂದು ಅವರು ಹೇಳಿದರು.

ಇದು ಜೀವನದ ಅತ್ಯಂತ ಆಶೀರ್ವಾದದ ಕ್ಷಣ ಎಂದು ಅಡ್ವ.  ಪಿ.ಎಸ್. ಶ್ರೀಧರನ್ ಪಿಳ್ಳೈ ತಮ್ಮ ಉತ್ತರ ಭಾಷಣದಲ್ಲಿ ಹೇಳಿದರು. ಬೆಳವಣಿಗೆಗೆ ವೇದಿಕೆ ಕಲ್ಪಿಸಿದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಒಳ್ಳೆಯ ವ್ಯಕ್ತಿಯಾಗುವುದು ಅತ್ಯಂತ ಮುಖ್ಯವಾದ ವಿಷಯ. ಶ್ರೀಧರನ್ ಪಿಳ್ಳೈ ಅವರು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಲ್ಲ, ಸಾಮಾನ್ಯ ಜನರೇ ಶ್ರೇಷ್ಠರು ಎಂದು ಗಮನಸೆಳೆದರು. ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ. ವಿರೋಧಿಗಳು ಮಾತ್ರ ಇದ್ದಾರೆ. ನನಗೆ ಕಾಂತಪುರಂ ಜೊತೆ ದೀರ್ಘಕಾಲದ ಸಂಬಂಧವಿದೆ. ವಿಭಿನ್ನ ಆಲೋಚನೆಗಳನ್ನು ಅನುಸರಿಸುತ್ತಿದ್ದರೂ, ಆತ್ಮೀಯ ಸಂಬಂಧ ಮುಂದುವರಿಯುತ್ತದೆ. 30 ವರ್ಷಗಳ ಹಿಂದೆ, ತಾನು ಮತ್ತು ಒ. ರಾಜಗೋಪಾಲ್ ಅವರ ಕಾಂತಪುರಂ ಭೇಟಿ ಕೂಡ ದೊಡ್ಡ ವಿವಾದವಾಗಿತ್ತು. ಕಾಲವೇ ಇದಕ್ಕೆಲ್ಲಾ ಉತ್ತರಿಸಿದೆ. ತಾನು ನಂಬುವ ಪಕ್ಷವು ಅವರನ್ನು ಆಹ್ವಾನಿಸುವ ಯಾವುದೇ ಕಾರ್ಯಕ್ರಮಕ್ಕೂ ಅವರು ಕಾಂತಪುರಕ್ಕೆ ಬರುತ್ತಾರೆ. ಕಾಂತಪುರಂ ಅದನ್ನು ರಹಸ್ಯವಾಗಿಡುವುದಿಲ್ಲ. ಇದೆಲ್ಲವೂ ವ್ಯಕ್ತಿಗಳ ನಡುವಿನ ಬಾಂಧವ್ಯದ ಬಲಕ್ಕೆ ಸಾಕ್ಷಿಯಾಗಿದೆ ಎಂದು ಪಿ.ಎಸ್. ಶ್ರೀಧರನ್ ಪಿಳ್ಳೈ ಹೇಳಿದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries