ಪತ್ತನಂತಿಟ್ಟ: ಇಂದು ಶಬರಿಮಲೆಯಲ್ಲಿ ಮಕರ ಬೆಳಕು ಉತ್ಸವದ ಸಂಭ್ರಮ. ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಪವಿತ್ರ ಆಭರಣಗಳೊಂದಿಗೆ ಮೆರವಣಿಗೆ ಇಂದು ಸನ್ನಿಧಾನಂ ತಲುಪಲಿದೆ. ಭದ್ರತಾ ವ್ಯವಸ್ಥೆಗಾಗಿ ಸನ್ನಿಧಾನಂ ಮತ್ತು ವಿವಿಧ ಕೇಂದ್ರಗಳಲ್ಲಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯು ಸನ್ನಿಧಾನದಲ್ಲಿ ಸುಮಾರು ಒಂದೂವರೆ ಲಕ್ಷ ಭಕ್ತರನ್ನು ನಿರೀಕ್ಷಿಸುತ್ತಿದೆ.
ನಿನ್ನೆ ಬೆಳಗ್ಗೆ ಅಯಿರೂರು ಪುತ್ತಿಕಾವ್ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಪೆರುನ್ನಾಡ್ ಮೂಲಕ ಸಾಗಿ ವಿವಿಧೆಡೆ ಸ್ವಾಗತ ನಂತರ ರಾತ್ರಿ ಅರಣ್ಯ ಇಲಾಖೆಯ ಲಾಹ ಸತ್ರಂನಲ್ಲಿ ವಿಶ್ರಾಂತಿ ಪಡೆಯಿತು. ಇಂದು ಬೆಳಿಗ್ಗೆ ಇಲ್ಲಿಂದ ಹೊರಟು ಮಧ್ಯಾಹ್ನ ಇಲ್ಲಿಂದ
ವಲಿಯನವಟ್ಟ ತಲುಪಲಿದೆ. ಅಲ್ಲಿ ದೇವಸ್ವಂ ಅಧಿಕಾರಿಗಳು ಬರಮಾಡಿಕೊಳ್ಳುತ್ತಾರೆ. ಚೆರಿಯಾನವಟ್ಟಂ ನೀಲಿಮಲ ಅಪಾಚೆಮೇಡು ಮಾರ್ಗವಾಗಿ ಮರಕೂಟ್ಟ ತಲುಪುವ ಮೆರವಣಿಗೆಯನ್ನು ಸನ್ನಿಧಾನದಲ್ಲಿ ದೇವಸ್ವಂ ಮಂಡಳಿ ಹಾಗೂ ಅಯ್ಯಪ್ಪಸೇವಾ ಸಂಗಮದ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಗುವುದು. ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹಾಗೂ ಸದಸ್ಯರ ನೇತೃತ್ವದಲ್ಲಿ ಸ್ವಾಗತಿಸಲಾಗುವುದು.
ನಂತರ ತಂತ್ರಿ ಕಂಠಾರರ್ ರಾಜೀವರ್ ಮತ್ತು ಮೇಲ್ಶಾಂತಿ ಅರುಣಕುಮಾರ್ ನಂಬೂದಿರಿ ಸನ್ನಿಧಿಯೊಳಗೆ ಕೊಂಡೊಯ್ಯುವರು. ಪೂಜೆಗಳ ನಂತರ ಅಯ್ಯಪ್ಪ ಮೂರ್ತಿಯ ಮೇಲೆ ತಿರುವಾಭರಣವನ್ನು ಇಟ್ಟು ಪೂಜಿಸಲಾಗುವುದು. ಈ ವೇಳೆ ಪೊನ್ನಂಬಲಮೇಟ್‌ನಲ್ಲಿ ಮಕರ ಜ್ಯೋತಿ ಕಾಣಿಸಲಿದೆ. ಜೊತೆಗೆ ಆಕಾಶದಲ್ಲಿ ಗರುಡ ಪ್ರದಕ್ಣಿಣೆಗೆಯ್ಯುವನು.
ಮೆರವಣಿಗೆಯನ್ನು ಮುನ್ನಡೆಸುವ ರಾಜನ ಪ್ರತಿನಿಧಿಯು ಪಂಪಾದಲ್ಲಿರುವ ರಾಜ ಮಂಟಪವನ್ನು ತಲುಪಿ ಭಕ್ತರಿಗೆ ಭಸ್ಮಪ್ರಸಾದ ನೀಡುವರು. ಸನ್ನಿಧಾನಂನಲ್ಲಿ ಕಳಭ ಮತ್ತು ಮಾಳಿಕಪ್ಪುರಂನಲ್ಲಿ ಕುರುದಿಯ ಬಳಿಕ ಶಬರಿಮಲೆಯಲ್ಲಿ ವಿಶೇಚಾರ್ಚನೆನಡೆಯಲಿದೆ. ಬಳಿಕ ರಾಜಪ್ರತಿನಿಧಿಯು ತಿರುವಾಭರಣ ಸಹಿತ ಪಂದಳಂಗೆ ಮರಳಲಿದ್ದಾರೆ.
ದಟ್ಟಣೆ ನಿರ್ವಹಣೆ ವ್ಯವಸ್ಥೆಯೂ ಜಾರಿಯಲ್ಲಿದೆ. ಮಕರ ಬೆಳಕು ಮುಗಿದು ಭಕ್ತರು ಹಿಂತಿರುಗಲು ಅವರೋಹಣದ ವಿವಿಧ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಮತ್ತು ವೈದ್ಯಕೀಯ ನೆರವು
ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ವಿ.ಅಜಿತ್ ತಿಳಿಸಿದ್ದಾರೆ. ಎಡಿಎಂ ಅರುಣ್ ಎಸ್ ನಾಯರ್ ಅವರು ಮಕರ ಬೆಳಕು ನಂತರ ಭಕ್ತರು ಸುರಕ್ಷಿತವಾಗಿ ಮರಳಲು ಖಚಿತ ನಿರ್ಗಮನ ಯೋಜನೆ ಇದೆ ಎಂದು ತಿಳಿಸಿದರು.