ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈಗ ಕಂಪನಿಗಳು 1 TB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಇನ್ನು ಫೋಟೋ, ಡಾಕ್ಯುಮೆಂಟ್‌ಗಳಿಂದ ಸ್ಟೋರೇಜ್ ಫುಲ್ ಆಗುವುದಲ್ಲದೆ, ಇತ್ತೀಚೆಗೆ ಆ್ಯಪ್‌ಗಳಿಂದಲೂ ಫೋನ್ ಸ್ಟೋರೇಜ್ ಫುಲ್ ಆಗುತ್ತಿದೆ.
ಆದರೆ ಫೋನಿನ ಸ್ಟೋರೇಜ್ ಫುಲ್ ಆದ್ರೆ ಫೋಟೋ ತೆಗೆಯಲು ಆಗೋದೆ ಇಲ್ಲ. ಜೊತೆಗೆ ಯಾವುದೇ ದಾಖಲೆಗಳನ್ನು ಡೌನ್‌ಲೋಡ್ ಮಾಡಲು, ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯವಾಗೋದೆ ಇಲ್ಲ. ಆಗ ಮೊಬೈಲ್‌ನಲ್ಲಿ ಆಗಾಗ ಸ್ಟೋರೇಜ್ ಫುಲ್ ಎಂದು ನೋಟಿಫಿಕೇಶನ್ ಕೂಡ ಬರುತ್ತದೆ. ಇದನ್ನು ನೋಡಿ ಜನ ಬೇಸತ್ತು ಹೋಗಿದ್ದಾರೆ.
ಆದ್ರೆ ಇಂದು ನಾವು ನಿಮಗೊಂದು ಟ್ರಿಕ್ಸ್ ಹೇಳ್ತೀವಿ. ಇದರಿಂದ ನೀವು ಸುಲಭದಲ್ಲಿ ಸ್ಟೋರೇಜ್ ಕ್ಲಿಯರ್ ಮಾಡಬಹುದು. ನೀವು Google ಫೋಟೋಗಳೊಂದಿಗೆ ಬ್ಯಾಕಪ್ ಮಾಡಿದರೆ, ನಿಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡಬಹುದು. ನಿಮ್ಮ ಮೊಬೈಲ್ಗೆ ನೆಟವರ್ಕ್ ಸಿಕ್ಕಿದಾಗ ಅಟೋಮ್ಯಾಟಿಕ್ ಆಗಿ ಅಪ್ಲಿಕೇಶನ್‌ನಲ್ಲಿ ಬ್ಯಾಕಪ್ ಮಾಡಿದ ಫೋಟೋಗಳನ್ನು ನೋಡಬಹುದು. ಅಂದರೆ ನೀವು ಗ್ಯಾಲರಿಯಿಂದ ಡಿಲೀಟ್ ಮಾಡಿದ್ರೂ, ಮಾಡದಿದ್ದರೂ ಗೂಗಲ್ ಸಹಾಯದಿಂದ ಎಲ್ಲವನ್ನೂ ಹಿಂಪಡೆಯಬಹುದು.
ಅನೇಕ ಬಾರಿ ನಾವು ಫೈಲ್ಸ್ಗಳನ್ನು ಡೌನ್‌ಲೋಡ್ ಮಾಡಿ ಫೋನ್‌ನಲ್ಲೇ ಹಾಗೇ ಇಡುತ್ತೇವೆ ಮತ್ತು ಅವುಗಳನ್ನು ನೋಡಿದ ನಂತರ ಡಿಲೀಟ್ ಮಾಡಲು ಮರೆತುಬಿಡುತ್ತೇವೆ. ಯಾವತ್ತೂ ಈ ತಪ್ಪು ಮಾಡ್ಬೇಡಿ. ಯಾವುದೇ ಫೈಲ್ಸ್ ನೋಡಿದ ನಂತರ ಬೇಡವೆಂದರೆ ಆಗಲೇ ಡಿಲೀಟ್ ಮಾಡಿ.
ಯೂಸ್ ಆಗದೇ ಇರೋ ಆ್ಯಪ್‌ಗಳನ್ನ ಮೊದಲು ಡಿಲೀಟ್ ಮಾಡಿ. ಸಾಮಾನ್ಯವಾಗಿ ಅನೇಕರು ಬೇಕು ಅಂದಾಗ ಕೆಲವೊಂದು ಆ್ಯಪ್‌ಗಳನ್ನ ಡೌನ್‌ಲೋಡ್ ಮಾಡಿರ್ತಾರೆ. ಆದ್ರೆ ಅದು ನಂತರ ಅಗತ್ಯನೇ ಇರಲ್ಲ. ಹಾಗೇ ಮೊಬೈಲ್‌ನಲ್ಲಿ ಸ್ಟೋರೇಜ್ ತುಂಬುತ್ತಿರುತ್ತೆ. ಅಂತಹ ಆ್ಯಪ್‌ಗಳನ್ನು ತಕ್ಷಣ ಮೊಬೈಲ್‌ನಿಂದ ಡಿಲೀಟ್ ಮಾಡಿ.