ಸ್ಯಾಂಟಿಯಾಗೊ : ದಕ್ಷಿಣ ಅಮೆರಿಕ ಖಂಡದ ಚಿಲಿ ದೇಶದಲ್ಲಿ ರಿಕ್ಟರ್ ಮಾಕಪದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಚಿಲಿಯ ಆಂಟೊಫಗಸ್ಟಾದಲ್ಲಿ ಭೂಕಂಪ ಸಂಭವಿಸಿದ್ದು, 104 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ.
ಚಿಲಿ ಭೂಕಂಪದ ಕುರಿತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಸಹ ಮಾಹಿತಿ ಮಾಡಿದೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಚಿತ್ರ ಹಂಚಿರುವ ಎನ್‌ಸಿಎಸ್, ಚಿಲಿ ಹಾಗೂ ಬೊಲಿವಿಯಾ ಗಡಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ತಕ್ಷಣಕ್ಕೆ ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...