ಕಾಸರಗೋಡು: ಜಿಲ್ಲೆಯ ವಿವಿಧೆಡೆ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಅಬಕಾರಿ ಚಎಕ್‍ಪೋಸ್ಟ್ ಸನಿಹ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಆಗಿಸುತ್ತಿದ್ದ 60.48ಲೀ. ವಿದೇಶಿ ಮದ್ಯ ಹಾಗೂ 48ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ. ಮದ್ಯಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬದಿಯಡ್ಕ ರೇಂಜ್ ಅಬಕಾರಿ ಅದಿಕಾರಿ ಸಯ್ಯದ್ ಮಹಮ್ಮದ್ ನೇತೃತ್ವದ ತಂಡ ಪೆರ್ಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 5.4ಲೀ. ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಮೊಯ್ದೀನ್‍ಕುಞÂ ಎಂಬಾತನನ್ನು ಬಂಧಿಸಲಾಗಿದೆ. ಕಾಸರಗೋಡು ಕರಂದಕ್ಕಾಡಿನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 900ಎಂ.ಎಲ್ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಬೀರಂತಬೈಲ್ ನಿವಾಸಿ ಅನಿಲ್ ಎಂಬಾತನನ್ನು ಬಂಧಿಸಲಾಘಿದೆ.