ಕೂದಲು ತುಂಬಾನೇ ಉದುರುತ್ತಿದೆ ಎಂದಾದರೆ ಇದರಲ್ಲಿ ಯಾವುದಾದರು ಒಂದು ಕಾರಣವಾಗಿರಬಹುದು:
ಮೆಡಿಕಲ್ ಕಂಡೀಷನ್': ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ಕೂದಲು ಉದುರುತ್ತದೆ, ಈ ರೀತಿಯಾದಾಗ ಕೂದಲು ತುಂಬಾನೇ ಉದುರಲಾರಂಭಿಸುತ್ತದೆ, ಸೋಂಕು, ಟೈಫಾಯ್ಡ್,ಮತ್ತಿತರ ಕಾಯಿಲೆಗಳಿಂದಾಗಿ ಕೂದಲು ಉದುರಬಹುದು.
ಹಾರ್ಮೋನ್‌ಗಳ ಅಸಮತೋಲನ ಕೂದಲು ಉದುರಲು ಮತ್ತೊಂದು ಪ್ರಮುಖ ಕಾರಣವೆಂದರೆ ಹಾರ್ಮೋನ್‌ಗಳ ಅಸಮತೋಲನ: ಗರ್ಭಧಾರಣೆಯಾದಾಗ, ಮೆನೋಪಾಸ್,ಪಿಚಿಒಎಸ್ ಅಥವಾ ಥೈರಾಯ್ಡ್ ಈ ರೀತಿ ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ ಕೂದಲು ತೆಳುವಾಗಲಾರಂಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ತುಂಬಾನೇ ಉದುರುತ್ತಿದೆ ಎಂದಾದರೆ ನೀವು ಹಾರ್ಮೋನ್‌ಗಳ ಅಸಮತೋಲನ ಉಂಟಾಗಿದೆಯೇ ಎಂದು ಪರೀಕ್ಷೆ ಮಾಡಿ ತಿಳಿದುಕೊಳ್ಳಿ. ಹಾರ್ಮೋನ್ ಸಮತೋಲನಕ್ಕೆ ಬಂದಾಗ ಕೂದಲು ಉದುರುವುದು ಕಡಿಮೆಯಾಗುವುದು. ಹಾರ್ಮೋನ್ ಸಮತೋಲನಕ್ಕೆ ಬಾರದೆ ಬಾಹ್ಯವಾಗಿ ನೀವು ಏನೇ ಆರೈಕೆ ಮಾಡಿದರೂ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಲ್ಲ.
ಮಾನಸಿಕ ಒತ್ತಡ: ಮಾನಸಿಕ ಒತ್ತಡ ಕೂಡ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ,ನಮ್ಮ ಕೂದಲು ಉದುರುವುದಕ್ಕೂ ಕಾರಣವಾಗುತ್ತದೆ. ಯಾವಾಗ ಒಬ್ಬ ವ್ಯಕ್ತಿ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅದು ಅವನ ಕೂದಲಿನ ಮೇಲೆ ಪರಿಣಾಮ ಬೀರುವುದು. ನೀವು ತುಂಬಾನೇ ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ ನೀವು ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡುವುದು ಒಳ್ಳೆಯದು.
ವಿಟಮಿನ್ ಕೊರತೆ: ಕಬ್ಬಿಣದಂಶ, ವಿಟಮಿನ್ ಡಿ, ಬಯೋಟಿನ್ ಇವುಗಳ ಕೊರತೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ರಕ್ತ ಹೀನತೆ ಉಂಟಾದಾಗ ಕೂಡ ಕೂದಲು ಉದುರುವುದು ಕಡಿಮೆಯಾಗುವುದು, ಕೂದಲಿನ ಬುಡಕ್ಕೆ ಆಕ್ಸಿಜನ್ ಸಪ್ಲೈ ಕಡಿಮೆಯಾದಾಗ ಪೋಷಕಾಂಶಗಳ ಕೊರೆತ ಉಂಟಾಗಲಿದೆ.
ಕೆಲವೊಂದು ಔಷಧಗಳು: ನಾವು ನಮ್ಮ ಆರೋಗ್ಯ ಸಮಸ್ಯೆಗೆ ತೆಗೆದುಕೊಳ್ಳುವ ಕೆಲವೊಂದು ಔಷಧಗಳಿಂದಲೂ ಕೂದಲು ಉದುರುವುದು, ಈ ರೀತಿಯಾದಾಗ ನೀವು ವೈದ್ಯರ ಸಲಹೆ ಪಡೆಯುವುದು ಸೂಕ್ತ. ರಕ್ತದೊತ್ತಡ, ಸಂಧಿವಾತ, ಖಿನ್ನತೆ ಇವುಗಳಿಗೆ ಔಷಧಿ ತೆಗೆದುಕೋಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗುವುದು.
ಕೂದಲಿಗೆ ಮಾಡುವ ಅಲಂಕಾರ: ಆಗಾಗ ಸ್ಟ್ರೈಟ್ನಿಂಗ್ ಮಾಡುವುದು, ಕೂದಲು ಬಿಸಿಯಾಗುವುದು, ಹೇರ್ ಡ್ರೈಯರ್ ಬಳಸುವುದು, ಕೂದಲನ್ನು ಕರ್ಲಿ ಮಾಡುವುದು ಹೀಗೆ ಕೂದಲಿಗೆ ಆಗಾಗ ಸ್ಟೈಲಂಗ್ ಮಾಡ್ತಾ ಇದ್ದಾರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಇಂಥ ವಸ್ತುಗಳನ್ನು ಭಳಸುವಾಗ ಗುಣಮಟ್ಟದ ವಸ್ತುಗಳನ್ನು ಬಳಸದೇ ಇದ್ದರೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.
ಹೀಗಾಗಿ ಕೂದಲು ಉದುರುತ್ತಿದೆ ಎಂದಾದರೆ ನೀವು ಮೊದಲು ಅದಕ್ಕೆ ಕಾರಣವೇನು ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿ, ಸುಮ್ಮನೆ ದುಬಾರಿ ಎಣ್ಣೆಗಳ ಮೊರೆ ಹೋಗಬೇಡಿ, ನಿಮ್ಮ ಕೂದಲಿಗೆ ಏನು ಅವಶ್ಯಕವೋ ಅದರಂತೆ ಆರೈಕೆಮಾಡಿ.
ಹೀಗಾಗಿ ಕೂದಲು ಉದುರುತ್ತಿದೆ ಎಂದಾದರೆ ನೀವು ಮೊದಲು ಅದಕ್ಕೆ ಕಾರಣವೇನು ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿ, ಸುಮ್ಮನೆ ದುಬಾರಿ ಎಣ್ಣೆಗಳ ಮೊರೆ ಹೋಗಬೇಡಿ, ನಿಮ್ಮ ಕೂದಲಿಗೆ ಏನು ಅವಶ್ಯಕವೋ ಅದರಂತೆ ಆರೈಕೆಮಾಡಿ.