ಕಾಸರಗೋಡು : ಲೇಖಕಿ, ದ್ರಾವಿಡ ಭಾಷಾ ಸಂಶೋಧಕಿ, ದ್ರಾವಿಡ ಭಾಷಾ ಅನುವಾದಕ ಸಂಘ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಬೆಂಗಳೂರು ಇವರ, ಇಡಶೇರಿ ಗೋವಿಂದನ್ ನಾಯರ್ ಬರೆದ "ಪೂತಪ್ಪಾಟ್ "ಎಂಬ ಮಲಯಾಳದಿಂದ ಅನುವಾದಿತ ಕೃತಿಯಾದ "ಭೂತದ ಹಾಡು " ಎಂಬ ಕನ್ನಡ ಪುಸ್ತಕದ ಲೋಕಾಪ್ನೆ ಕಾರ್ಯಕ್ರಮ ಜ. 7ರಂದು ಸಂಜೆ 5ಕ್ಕೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಜರುಗಲಿದೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಅನುವಾದ ಸಾಹಿತಿ ಕೆ. ವಿ. ಕುಮಾರನ್ ಮಾಸ್ಟರ್ ಪುಸ್ತಕ ಬಿಡುಗಡೆ ಗೊಳಿಸುವರು. ಡಾ. ಸುಷ್ಮಾ ಶಂಕರ್ ಅನುವಾದ ಸಾಹಿತ್ಯದ ಬಗ್ಗೆ ವಿಚಾರ ಮಂಡಿಸುವರು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಡಾ. ಸುಷ್ಮಾ ಶಂಕರ್ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ "ಕನ್ನಡ ಪಯಸ್ವಿನಿ ಪ್ರಶಸ್ತಿ "ನೀಡಿ ಪುರಸ್ಕರಿಸಲಾಗುವುದು. ಕಾಸರಗೋಡಿನ ಹಿರಿಯ ಸಾಹಿತಿಗಳು, ಕವಿಗಳು, ಭಾಷಾಭಿಮಾನಿಗಳು, ಸಾಹಿತ್ಯಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.