ಕಾಸರಗೋಡು: ಶಬರಿಮಲೆಯಲ್ಲಿ ಮಕರಜ್ಯೋತಿ ಕಾಲಾವಧಿಯಲ್ಲಿ ದಿನವೊಂದಕ್ಕೆ 70ಸಾವಿರ ಮಂದಿಗೆ ವರ್ಚುವಲ್ ಕ್ಯೂ ಹಾಗೂ 10ಸಾವಿರ ಮಂದಿಗೆ ಸ್ಪಾಟ್ ಬುಕ್ಕಿಂಗ್ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸಿದವರಲ್ಲಿ ಬಹುತೇಕ ಮಂದಿ ನಾನಾ ಕಾರಣಗಳಿಂದ ತಲುಪಲಾಗದ ಪರಿಸ್ಥಿತಿಯಿದೆ. ಈ ರೀತಿ ತಲುಪದವರು ತಮ್ಮ ಬುಕ್ಕಿಂಗ್ ರದ್ದುಪಡಿಸುವಂತೆಯೂ ಇದರಿಂದ ಇತರ ಭಕ್ತಾದಿಗಳಿಗೆ ಪ್ರಯೋಜನವಾಗುವುದಾಗಿ ದೇವಸ್ವಂ ಬೋರ್ಡ್ ಸೂಚಿಸಿದೆ.
ಜ. 11ರ ವರೆಗೆ ಪ್ರತಿದಿನ 70ಸಾವಿರ ಮಂದಿಗೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮೂಲಕ ದರ್ಶನಕ್ಕೆ ಅವಕಾಶಮಾಡಿಕೊಡಲಾಗಿದ್ದು, 12ರಂದು 60ಸಾವಿರ, 13ರಂದು 50ಸಾವಿರ ಹಾಗೂ 14ರಂದು 40ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 12ರಿಂದ 14ರ ವರೆಗೆ ಸ್ಪಾಟ್ ಬುಕ್ಕಿಂಗ್ ರದ್ದುಪಡಿಸಲಾಗಿದೆ. ಜ. 19ರ ವರೆಗೆ ಶಬರಿಮಲೆ ಭಕ್ತಾದಿಗಳಿಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ.
ಹೊಸ ವರ್ಷ ಸ್ವಾಗತಿಸಿದ ಶಬರಿಮಲೆ:
ಶಬರಿಮಲೆ ಸನ್ನಿದಾನದಲ್ಲಿ ಕರ್ತವ್ಯ ನಿರತ ಕೇರಳ ಪೆÇಲೀಸ್ ತಂಡ, ಕ್ಷಿಪ್ರ ಕಾರ್ಯಾಚರಣೆ ಪಡೆ, ಅಗ್ನಿಶಾಮಕ ದಳ ಮತ್ತಿತರ ಇಲಾಖೆಗಳು ಹೊಸ ವರ್ಷವನ್ನು ಸ್ವಾಗತಿಸಿದರು.
ಕರ್ಪೂರ ಬಳಸಿ ಹ್ಯಾಪ್ಪಿ ನ್ಯೂ ಇಯರ್ ಎಂದು ಬರೆಯುವ ಮೂಲಕ ಉರಿಸಿ ಹೊಸ ವರ್ಷದ ಶುಭಾಶಯಗಳೊಂದಿಗೆ ಸ್ವಾಗತಿಸಲಾಯಿತು. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಶಬರಿಮಲೆ ಪೆÇಲೀಸ್ ಮುಖ್ಯ ಸಂಯೋಜಕ ಎಡಿಜಿಪಿಎಸ್ ಶ್ರೀಜಿತ್ ಕರ್ಪೂರ ಬೆಳಗಿಸಿದರು. ಅಯ್ಯಪ್ಪ ಭಕ್ತರಿಗೆ ಇದೊಂದು ಕುತೂಹಲದ ದೃಶ್ಯವಾಯಿತು. ಶರಣ ಘೋಷಣೆಯೊಂದಿಗೆ ಭಕ್ತಾದಿಗಳೂ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು.