ಕಾಸರಗೋಡು: ತ್ಯಾಜ್ಯ ಮುಕ್ತ ನವ ಕೇರಳ ಸಾರ್ವಜನಿಕ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಜ.7ರವರೆಗೆ ತ್ಯಾಜ್ಯ ವಿಲೇವಾರಿ ವಿರೋಧಿ ಸಪ್ತಾಹ ಅಭಿಯಾನವನ್ನು ಆಯೋಜಿಸಲಾಗಿದೆ. ತ್ಯಾಜ್ಯ ಮುಕ್ತ ನವ ಕೇರಳ ಜನಾಂದೋಲನ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದರೂ ಸಾರ್ವಜನಿಕ ಸ್ಥಳ, ಬೀದಿಗಳಲ್ಲಿ ತ್ಯಾಜ್ಯ ಸುರಿಯುವ ಪ್ರವೃತ್ತಿ ಇನ್ನೂ ಮುಂದುವರಿಯುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತಲು ಸ್ಥಳೀಯರು ಮುಂದಾಗಬೇಕು. ಪ್ರಸಕ್ತ ಶುಚೀಕರಣ ಕೈಗೊಳ್ಳುವುದರ ಜತೆಗೆ ಸ್ಥಳೀಯಾಡಳಿತ ಸಂಸ್ಥೆ, ಯುವ ಸಂಘಟನೆಗಳು, ಹೌಸಿಂಗ್ ಕಾಲನಿ ಸಂಘಗಳು, ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳು, ಸೇವಾ-ಕಾರ್ಮಿಕ ಸಂಸ್ಥೆಗಳು, ಎನ್‍ಜಿಒಗಳು, ಕಲಾ ಮತ್ತು ಸಾಂಸ್ಕøತಿಕ ಸಂಸ್ಥೆಗಳು ಅಬಿಯಾನದ ಯಶಸ್ವಿಗಾಗಿ ಆಯಾ ಪ್ರದೇಶದ ಉಸ್ತುವಾರಿ ವಹಿಸಿಕೊಳ್ಳಲಿದೆ. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡು ಮಟ್ಟದ ಕಾರ್ಯಕಾರಿ ಸಮಿತಿ ಸಭೆಗಳು ತ್ಯಾಜ್ಯ ಡಂಪಿಂಗ್‍ಗೆ ಸಂಬಂಧಿಸಿದ ಚಟುವಟಿಕೆಗಳನ್ನು ತಯಾರಿಸಲಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಅರಿವಿಗೆ ಬಾರದೆ ಅಥವಾ ಅನುಮತಿಯಿಲ್ಲದೆ ಅನಧಿಕೃತಗುಂಪುಗಳು, ಏಜೆನ್ಸಿಗಳು ಮತ್ತು ವ್ಯಕ್ತಿಗಳು ಮನೆಗಳು ಮತ್ತು ಸಂಸ್ಥೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವುದನ್ನು ಮತ್ತು ಅದನ್ನು ರಸ್ತೆ ಅಂಚಿಗೆ ಎಸೆಯುವುದನ್ನು ತಡೆಯುವುದರ ಜತೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಗಡಿಗಳಲ್ಲಿ ಸುರಿದಿರುವ ತ್ಯಾಜ್ಯವನ್ನು ತೆರವುಗೊಳಿಸಲಾಗುವುದು.
ಸಾರ್ವಜನಿಕ ಸಮಿತಿಯ ಸಹಕಾರದೊಂದಿಗೆ ಅನಧಿಕೃತವಾಗಿ ತ್ಯಾಜ್ಯ ಸುರಿಯುವ ಪ್ರದೇಶಗಳ ಬಗ್ಗೆ ನಿಗಾಯಿರಿಸುವುದು ಮತ್ತು ಹೆಚ್ಚು ಸಾರ್ವಜನಿಕ ಗಮನವನ್ನು ಸೆಳೆಯುವ ಪ್ರವಾಸಿ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು, ಉದ್ಯಾನಗಳನ್ನು ಕಸ ಮುಕ್ತ ಪ್ರದೇಶಗಳಾಗಿ ಪರಿವತಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿರುವ ಎಲ್ಲಾ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಸಮುಕ್ತಗೊಳಿಸಲಾಗುವುದು ಮತ್ತು ತ್ಯಾಜ್ಯ ಸುರಿಯುವುದನ್ನು ವರದಿ ಮಾಡಲು ವಾಟ್ಸಪ್ ಸಂಖ್ಯೆ(9446700800) ಒದಗಿಸುವುದು ಅಭಿಯಾನದ ಉದ್ದೇಶಗಳಾಗಿದೆ.