ಮಂಜೇಶ್ವರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವವು ಕುಳೂರು ಶ್ರೀಹರಿ ಭಜನಾ ಮಂದಿರದಲ್ಲಿ ಉಪ್ಪಳ ಘಟಕದ ಗೌರವಾಧ್ಯಕ್ಷÀ ಪಿ. ಆರ್. ಶೆಟ್ಟಿ ಪೆÇಯ್ಯೇಲು ಕುಳೂರು ಇವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ವೇದಮೂರ್ತಿ ಗಣೇಶ ನಾವಡ ಮೀಯಪದವು, ಅಧ್ಯಕ್ಷÀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಾಣ ತೊಟ್ಟೆತ್ತೋಡಿ, ಯಕ್ಷಗಾನ ಗುರು ರಾಮ ಸಾಲಿಯಾನ್, ಯಕ್ಷಗಾನ ಅಕಾಡೆಮಿ ನಿಕಟ ಪೂರ್ವ ಸದಸ್ಯ ದಾಮೋದರ ಶೆಟ್ಟಿ, ಶ್ರೀಹರಿ ಭಜನಾ ಮಂದಿರದ ಅಧ್ಯಕ್ಷೆ ಕುಳೂರು ಪಾದೆ ಕೃಷ್ಣವೇಣಿ ಡಿ. ಶೆಟ್ಟಿ ಉಪಸ್ಥಿತರಿದ್ದರು.
ಘಟಕದ ಸಂಚಾಲಕ ಯೋಗೀಶ್ ರಾವ್ ಚಿಗುರುಪಾದೆ ಸ್ವಾಗತಿಸಿ, ಜಯಪ್ರಕಾಶ್ ನಿರೂಪಿಸಿ ವಂದಿಸಿದರು. ಈ ಸಂದರ್ಭ ಶ್ರೀಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಶ್ರೀಹರಿ ಲೀಲಾಮೃತ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.