ಬದಿಯಡ್ಕ: ಕಾರಿನಲ್ಲಿ ಸಾಗಿಸುತ್ತಿದ್ದ 83.890ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಬದಿಯಡ್ಕ ಠಾಣೆ ಪೊಲೀಸರ ತಂಡ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ. ಕಾಸರಗೋಡು ತಾಯಲಂಗಾಡಿ ಕುನ್ನಿಲ್ ನಿವಾಸಿ ಅಬ್ದುಲ್ ಸಲಾಂ ಹಾಗೂ ಚೆಂಗಳ ಬಾಲಡ್ಕ ನಿವಾಸಿ ಮಹಮ್ಮದ್ ಸಲೀಂ ಬಂಧಿತರು. ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ ಪ್ರೇಂದಾಸ್ ಅವರ ನಿರ್ದೇಶನದ ಮೇರೆಗೆ ಬದಿಯಡ್ಕ ಠಾಣೆ ಎಸ್.ಐ ಕೆ.ಕೆ ನಿಖಿಲ್ ನೇತೃತ್ವದ ಪೊಲೀಸರ ತಂಡ ಪೆರ್ಲ ಚೆಕ್‍ಪೋಸ್ಟ್ ವಠಾರದಲ್ಲಿ ಕಾರ್ಯಾಚರಣೆ ನಡೆಸಿ ವಿಟ್ಲ ಭಾಗದಿಂದ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಮಾದಕ ದ್ರವ್ಯ ಸಾಘಟಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಮಾದಕ ದ್ರವ್ಯ ಎಂಡಿಎಂಎ ಪೂರೈಸುವ ಪ್ರಮುಖ ಕೊಮಡಿ ಇವರಾಗಿದ್ದು, ಕರ್ನಾಟಕದಿಂದ ಕಾಸರಗೋಡಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದರೆನ್ನಲಾಗಿದೆ.