ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಶಾಸಕರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾಗಿರುವ ಸಹಕಾರ ಬ್ಯಾಂಕಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯದ (ಇ.ಡಿ) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳ ಹಿಂದೆ ಇ.ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು.
ಇದರ ಭಾಗವಾಗಿ ಭಾನುವಾರ ಸಹಕಾರ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಸಹಕಾರಿ ಬ್ಯಾಂಕ್‌ನ ಮಾಜಿ ಸಿಇಒ ವಿಪಿನ್ ತಿವಾರಿ, ಅವರ ಮಾವ ರಾಮ್ ಬಾಬು, ನಿತಿನ್ ಮೆಹ್ರಾ ಮತ್ತು ಸಂದೀಪ್ ಸಿಂಗ್ ಸೇರಿದ್ದಾರೆ. ಉರ್ಜಿಯಾಪುರದ ಆರ್‌ಜೆಡಿ ಶಾಸಕ ಆಲೋಕ್ ಕುಮಾರ್ ಮೆಹ್ತಾ ಹೆಸರು ಈ ಹಗರಣದಲ್ಲಿ ಕೇಳಿಬಂದಿದೆ.
ಇ.ಡಿ ಸೇರಿದಂತೆ ಬಿಹಾರ ಪೊಲೀಸರು ಈ ಹಣ ದುರ್ಬಳಕೆ ಅವ್ಯವಹಾರದಲ್ಲಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಬ್ಯಾಂಕಿನಲ್ಲಿ ಸುಮಾರು ₹ 85 ಕೋಟಿ ಹಣದ ದುರ್ಬಳಕೆಯ ಆರೋಪವಿದೆ.
400ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ತೆರೆದು ಅಕ್ರಮವೆಸಲಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.