HEALTH TIPS

ತಲಪಾಡಿ ಟೋಲ್ ಅಧಿಕಾರಸ್ಥರ ತಾರತಮ್ಯ- ನೀತಿ ಹಾಗೂ ಗೂಂಡಾಗಿರಿ ವಿರುದ್ಧ ಜನವರಿ 8 ಕ್ಕೆ ಪ್ರತಿಭಟನಾ ಧರಣಿ : ಕ್ರಿಯಾ ಸಮಿತಿಯಿಂದ ಸುದ್ದಿ ಗೋಷ್ಟಿ

ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ಅಧಿಕಾರಸ್ಥರ ತಾರತಮ್ಯ ನೀತಿ ಹಾಗೂ ಸಿಬ್ಬಂದಿಗಳ ಗೂಂಡಾಗಿರಿ ವಿರುದ್ಧ ಮಂಜೇಶ್ವರ ಟೋಲ್ ಗೇಟ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ 2024 ಜನವರಿ 8 ರಂದು ಸಂಜೆ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ಸೂಚನಾ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಟೋಲ್ ಗೇಟ್ ಕ್ರಿಯಾ ಸಮಿತಿ ಕನ್ವೀನರ್ ಅಬ್ದುಲ್ ರಹೀಂ ಭಾನುವಾರ ಸಂಜೆ ಕುಂಜತ್ತೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ  ತಿಳಿಸಿದ್ದಾರೆ.

ತಲಪಾಡಿ ಟೋಲ್ ಗೇಟ್ ಸ್ಥಾಪಿತಗೊಂಡ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ನಿವಾಸಿಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗುತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ ರದ್ದು ಪಡಿಸಿ ಈ ಭಾಗದಿಂದ ತೆರಳುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತಿತ್ತು.

ಅಧಿಕಾರಸ್ಥರ ತಾರತಮ್ಯ ವಿರೋಧಿಸಿ ಸ್ಥಳೀಯ ಜನರನ್ನು ಒಟ್ಟು ಸೇರಿಸಿ ತಮಗಾಗುವ ಅನ್ಯಾಯವನ್ನು ಎದುರಿಸುವ ಉದ್ದೇಶದಿಂದ ಆರಂಭದಲ್ಲಿ ಶಾಂತಿಯುತವಾದ ರೀತಿಯಲ್ಲಿ ಸೂಚನಾ ಪ್ರತಿಭಟನಾ ಧರಣಿಗೆ ಸಿದ್ದತೆಗಳು ನಡೆಯುತ್ತಿರುವುದಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು.

ಟೋಲ್ ಗೇಟ್ ಅಧಿಕಾರಸ್ಥರಿಂದ ಇದಕ್ಕೊಂದು ಸಕಾರಾತ್ಮಕ ರೀತಿಯ ಪ್ರತಿಕ್ರಿಯೆ ಲಭಿಸದೇ ಕಾನೂನಾತ್ಮಕ ರೀತಿಯಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಿಸಿ ಉಪವಾಸ ಸತ್ಯಾಗ್ರಹ ರೀತಿಯ ಚಳವಳಿಗೂ ಮುಂದಾಗಲಿರುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.

ಟೋಲ್ ಗೇಟ್ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಕುಂಜತ್ತೂರು, ಜಬ್ಬಾರ್ ಪದವು ಹಾಗೂ ಅಶ್ರಫ್ ಬಡಾಜೆ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries