ಕಾಸರಗೋಡು : ನೆಲ್ಲಿಕುಂಜೆಯಲ್ಲಿರುವ ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ 50ಸಂವತ್ಸರ ಪೂರ್ತಿಗೊಳಿಸುತ್ತಿರುವ ನಿಟ್ಟಿನಲ್ಲಿ ಸುವರ್ಣ ಮಹೋತ್ಸವದಂಗವಾಗಿ ಆಯೋಜಿಸಲಾಗಿದ್ದ ವರ್ಷಪೂರ್ತಿಕಾರ್ಯಕ್ರಮ ಜನವರಿ 9, 10 ಮತ್ತು 11 ರಂದು ಶಾಲೆಯಲ್ಲಿ ನಡೆಯಲಿರುವುದಾಗಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಶೀದ್ ಪೂರಣಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿವಸಗಳ ಕಾಲ ವಿವಿಧ ಕಲಾ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. 2024ರಲ್ಲಿ ಸಂಸದ ಪಿ.ರಾಜಮೋಹನ್ ಉಣ್ಣಿತ್ತಾನ್ ಅವರಿಂದ ವರ್ಷಪೂರ್ತಿ ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ವಸ್ತುಪ್ರದರ್ಶನ ಹಾಗೂ ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಹಿರಿಯ ನಾಗರಿಕರಿಗೆ ಪ್ರೀತಿಯ ಉಡುಗೊರೆ ನೀಡುವ ಕಾರ್ಯಖ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ಸುವರ್ಣಮಹೋತ್ಸವ ಅಂಗವಾಗಿ ಜನವರಿ 9ರಂದು ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ ಉದ್ಘಾಟಿಸುವರು. ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಪಿಟಿಎ- ಸಂಘಟನಾ ಸಮಿತಿ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಶಾಲಾ ಆವರಣದಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ.
ಸಂಜೆ 4ಕ್ಕೆ ಶಾಲಾ ಆವರಣದಲ್ಲಿ ಶಾಲಾ ಪಿಟಿಎ ಅಧ್ಯಕ್ಷ ರಶೀದ್ ಪೂರಣಂ ಧ್ವಜಾರೋಹಣ ನೆರವೇರಿಸುವರು. 10ರಂದು ಸಂಜೆ 6ರಿಂದ ವಿವಿಧ ಕಲಾ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಒಪ್ಪನ, ತಿರುವಾತಿರ, ಕೋಲ್ಕಳಿ, ಸಿನಿಮಾ ಡ್ಯಾನ್ಸ್, ಮ್ಯಾಜಿಕ್ ಶೋ, ಕರೋಕೆ ಗಯನ ನಡೆಯುವುದು. .11ರಂದು ಬೆಳಗ್ಗೆ 9.30ಕ್ಕೆ ಅಧ್ಯಾಪಕರ ಸಂಗಮ ನಡೆಯುವುದು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ಸಮಾರಂಭ ಉದ್ಘಾಟಿಸುವರು. ಮಧ್ಯಾಹ್ನ 1ಗಂಟೆಗೆ ಶಾಲಾ ಹಳೇ ವಿದ್ಯಾರ್ಥಿ ಸಂಗಮ, ಕಲಾ,ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. ಸಂಜೆ 4ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಶಾಸಕ ಸಿ.ಎಚ್ ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅದ್ಯಕ್ಷತೆ ವಹಿಸುವರು.ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಪ್ರಧಾನ ಸಂಚಾಲಕ ಎಂ.ರಾಜೀವನ್, ಹಣಕಾಸು ಸಮಿತಿ ಅಧ್ಯಕ್ಷ ಹಸೈನಾರ್ ತಳಂಗರ, ಎಚ್.ಎಂ.ಪಿ.ಸವಿತಾ, ವಿಎಚ್‍ಸಿ ಪ್ರಾಚಾರ್ಯ ಆರ್.ಎಸ್.ಶ್ರೀಜಾ ಪ್ರಚಾರ ಅಧ್ಯಕ್ಷ ಶಾಫಿ ಸುರಕತ್ ಉಪಸ್ಥಿತರಿದ್ದರು.
(ಕಾಸರಗೋಡು ನೆಲ್ಲಿಕುಂಜೆಯ ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ.)