ತಿರುವನಂತಪುರಂ: 63ನೇ ರಾಜ್ಯ ಶಾಲಾ ಕಲೋತ್ಸವ ನಾಳೆಯಿಂದ ಆರಂಭವಾಗಲಿದೆ. ಬೆಳಗ್ಗೆ 9 ಗಂಟೆಗೆ ಮುಖ್ಯ ಸ್ಥಳವಾದ ಸೆಂಟ್ರಲ್ ಸ್ಟೇಡಿಯಂ (ಎಂಟಿ ನಿಲಾ)ದಲ್ಲಿ ಧ್ವಜಾರೋಹಣ ನಡೆಯಲಿದೆ. 10 ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸುವರು.
ಶ್ರೀನಿವಾಸನ್ ತೂಣೇರಿ ರಚಿಸಿದ, ಕಾವಾಲಂ ಶ್ರೀಕುಮಾರ್ ರಚನೆಯ ಸ್ವಾಗತ ಗೀತೆಯ ನೃತ್ಯ ಪ್ರದರ್ಶನವನ್ನು ಕಲಾಮಂಡಳ ಹಾಗೂ ಪಬ್ಲಿಕ್ ಶಾಲೆಯ ಮಕ್ಕಳಿಂದ ನಡೆಯಲಿದೆ. ವಯನಾಡ್ ವೆಳ್ಳರ್ಮಲಾ ಜಿಎಚ್‌ಎಸ್‌ಎಸ್‌ನ ಮಕ್ಕಳು ಸಮೂಹ ನೃತ್ಯ ಪ್ರದರ್ಶಿಸಲಿದ್ದಾರೆ.
ಉದ್ಘಾಟನೆಯ ನಂತರ ಮೊದಲ ವೇದಿಕೆಯಲ್ಲಿ ಪ್ರೌಢಶಾಲಾ ಬಾಲಕಿಯರಿಗಾಗಿ ಮೋಹಿನಿಯಾಟ್ಟಂ ಸ್ಪರ್ಧೆ ನಡೆಯಲಿದೆ. 25 ಸ್ಥಳಗಳಲ್ಲಿ ವೇದಿಕೆ ಸ್ಪರಗದೇಗಳು ನಡೆಯುತ್ತವೆ. ಸ್ಪರ್ದ್ಧೆ ವೀಕ್ಷಿಸಲು ಮತ್ತು ಪ್ರಗತಿಯನ್ನು ನೇರವಾಗಿ ತಿಳಿಯಲು ಕೈಟ್ ಮೊಬೈಲ್ ಅಪ್ಲಿಕೇಶನ್ ಇದೆ. ಉತ್ಸವಂ ಹೆಸರಿನ ಅಪ್ಲಿಕೇಶನ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಎ ಗ್ರೇಡ್ ಗಳಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಬಾರಿ 1,000 ರೂ.ಗಳ ಸಾಂಸ್ಕೃತಿಕ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಸುಮಾರು 15,000 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಉತ್ಸವ ಮತ್ತು ಅರೇಬಿಕ್ ಸಾಹಿತ್ಯೋತ್ಸವ ಕೂಡಾ
ನಡೆಯಲಿವೆ ಸ್ಥಳೀಯ ಜನರ ಐದು ನೃತ್ಯ ಪ್ರಕಾರಗಳು (ಮಂಗಳಂಕಾಳಿ, ಪನಿಯಾ ನೃತ್ಯ, ಪಾಳಿಯ ನೃತ್ಯ, ಮಲಪುಲಯ ಅಟ್ಟಂ ಮತ್ತು ಇರುಳ ನೃತ್ಯ) ಇದೇ ಮೊದಲ ಬಾರಿ ಸ್ಪರ್ಧೆಯಲ್ಲಿವೆ.
ರಾಜ್ಯ ಶಾಲಾ ಕಲೋತ್ಸವ ನಾಳೆಯಿಂದ ಆರಂಭ; ಬೆಳಗ್ಗೆ 9 ಕ್ಕೆ ಧ್ವಜಾರೋಹಣ
0
ಜನವರಿ 03, 2025
Tags