ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಹಿಂದಿ ದಿನ ಆಚರಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ.ಅಧ್ಯಕ್ಷತೆ ವಹಿಸಿದ್ದರು. ಹಿಂದಿ ಉಪನ್ಯಾಸಕಿ ಚಂದ್ರಿಕಾ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಹಿಂದಿ ಭಾಷೆಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ನೀಡಲಾಗಿದೆ. ಭಾಷೆಯ ಜಾಗತಿಕ ಅಸ್ಥಿತ್ವವನ್ನು ಹೆಚ್ಚಿಸಲು ಹಿಂದಿ ದಿವಸ್ ಆಚರಿಸಲಾಗುತ್ತದೆ ಎಂದರು. ಸ್ವಯಂ ಸೇವಕಿ ಪ್ರಜ್ಞಾ ಸ್ವಾಗತಿಸಿ,. ಶ್ರೇಯಸ್ ವಂದಿಸಿದರು. ಅನುಜ್ಞ ನಿರೂಪಿಸಿದರು.