ನವದೆಹಲಿ: ಶಿಕ್ಷಣ ತಜ್ಞ, ಎಎಪಿ ಅಭ್ಯರ್ಥಿ ಅವಧ್ ಓಝಾ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಚುನಾವಣಾ ಆಯೋಗ ಆದೇಶಿಸಿದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಸೋಮವಾರ ತಿಳಿಸಿದರು. ಈ ಮೂಲಕ ಓಝಾ ಅವರ ಉಮೇದುವಾರಿಕೆಗೆ ಎದುರಾಗಿದ್ದ ಅಡ್ಡಿಯೊಂದು ದೂರವಾಗಿದೆ.
ಕೇಜ್ರಿವಾಲ್ ಮತ್ತು ಇತರ ಹಿರಿಯ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಓಝಾ ಅವರ ಹೆಸರನ್ನು ಸೇರ್ಪಡೆ ಮಾಡಲು ಅವಕಾಶ ನೀಡಿದ ಆಯೋಗಕ್ಕೆ ಕೇಜ್ರಿವಾಲ್ ಧನ್ಯವಾದ ತಿಳಿಸಿದರು.
ಓಝಾ ಅವರ ಹೆಸರನ್ನು ಗ್ರೇಟರ್ ನೋಯ್ಡಾ ಕ್ಷೇತ್ರದ ಮತದಾರರಾಗಿ ನೋಂದಾಯಿಸಲಾಗಿದೆ. ಪಟಪಡಗಂಜ್ ಕ್ಷೇತ್ರದಿಂದ ಪಕ್ಷವು ಅವರಿಗೆ ಟಿಕೆಟ್ ನೀಡಿದೆ.