ನವದೆಹಲಿ: ಕ್ವಿಕ್- ಕಾಮರ್ಸ್ ಕಂಪನಿ ಬ್ಲಿಂಕಿಟ್ 10 ನಿಮಿಷಗಳಲ್ಲಿ ಆಯಂಬುಲೆನ್ಸ್ ಸೇವೆ ಒದಗಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ನೆಲದ ಕಾನೂನನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
10 ನಿಮಿಷಗಳಲ್ಲಿ ಆಯಂಬುಲೆನ್ಸ್ ಸೇವೆಯನ್ನು ಗುರುಗಾವ್‌ನಲ್ಲಿ ಆರಂಭಿಸಿದೆ. ಬ್ಲಿಂಕಿಟ್‌ಆಯಪ್‌ನಲ್ಲಿ ಆಯಂಬುಲೆನ್ಸ್‌ಗೆ ಕರೆ ಮಾಡುವ ಆಯ್ಕೆಯನ್ನೂ ನೀಡಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗೋಯಲ್, 'ಬ್ಲಿಂಕಿಟ್ ಒದಗಿಸುತ್ತಿರುವ ಆಯಂಬುಲೆನ್ಸ್ ಸೇವೆ ವೇಳೆ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂತೆ ಕಂಪನಿ ನೋಡಿಕೊಳ್ಳಬೇಕು. ಕಾನೂನಾತ್ಮಕವಾಗಿ ಯಾವೆಲ್ಲಾ ರೀತಿಯ ಅಗತ್ಯತೆಗಳಿವೆಯೋ ಅವೆಲ್ಲವನ್ನೂ ಪಾಲಿಸಬೇಕು' ಎಂದು ತಿಳಿಸಿದ್ದಾರೆ.
ಕಾನೂನನ್ನು ಉಲ್ಲಂಘಿಸಿದ ಮತ್ತು ದುರುಪಯೋಗಪಡಿಸಿಕೊಂಡ ಕೆಲವು ಕಂಪನಿಗಳ ವಿರುದ್ಧ ಈಗಾಗಲೇ ತನಿಖಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.