ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಸ್ಥಳೀಯ ಭಾರತೀಯ ಸೇನಾ ಘಟಕದಿಂದ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಆದರೆ ಇದನ್ನು ಕೆಲವರು ಶ್ಲಾಘಿಸುತ್ತಿದ್ದರೆ ಮತ್ತೆ ಕೆಲ ಅನುಭವಿಗಳು ಮತ್ತು ಸ್ಥಳೀಯರು ಇದರ ಪ್ರಸ್ತುತತೆಯನ್ನು ಪ್ರಶ್ನಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪ್ರತಿಮೆಯನ್ನು 14,300 ಅಡಿ ಎತ್ತರದಲ್ಲಿ ಪ್ಯಾಂಗೊಂಗ್ ತ್ಸೋ ತೀರದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಚರ್ಚೆ ಹುಟ್ಟು ಹಾಕಿತು.
ಶೌರ್ಯ, ದೂರದೃಷ್ಟಿ ಮತ್ತು ಅಚಲ ನ್ಯಾಯದ ಅತ್ಯುನ್ನತ ಸಂಕೇತದ ಪ್ರತಿಮೆಯನ್ನು GOC ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಮತ್ತು ದಿ ಮರಾಠ ಲೈಟ್ ಇನ್ ಫಾಂಟ್ರಿಲ್ ಕರ್ನಲ್ ಲೆಫ್ಟಿನೆಂಟ್ ಜನರಲ್ ಹಿತೇಶ್ ಭಲ್ಲಾ ಉದ್ಘಾಟಿಸಿದರು. ಇದು ಭಾರತೀಯ ಆಡಳಿತಗಾರನ ಅಚಲ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಕಾರ್ಪ್ಸ್ ಹೇಳಿದೆ.
ಸೇನೆಯ ಕ್ರಮಕ್ಕೆ ಸ್ಥಳೀಯ ನಿವಾಸಿಯಾಗಿರುವ ಚುಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಸೇರಿದಂತೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ನಮ್ಮ ಅನನ್ಯ ಪರಿಸರ ಮತ್ತು ವನ್ಯಜೀವಿಗಳು ನಮ್ಮ ಸಮುದಾಯ ಮತ್ತು ಪ್ರಕೃತಿಯನ್ನು ನಿಜವಾಗಿಯೂ ಪ್ರತಿಬಿಂಬಿಸುವ ಮತ್ತು ಗೌರವಿಸುವ ಯೋಜನೆಗಳಿಗೆ ಆದ್ಯತೆ ನೀಡೋಣ ಎಂದಿದ್ದಾರೆ.
ಶಿವಾಜಿ ಪ್ರತಿಮೆ ನಿರ್ಮಿಸಿರುವ ಪ್ಯಾಂಗೊಂಗ್ ತ್ಸೋ ಸರೋವರ ಭಾರತೀಯ ಸೇನೆ ಮತ್ತು ಚೀನಾ ಸೇನೆ ನಡುವಣ ಸಂಘರ್ಷದ ಸ್ಥಳವಾಗಿದ್ದು, ಈಗಲೂ ಕೂಡಾ 100,000 ಕ್ಕೂ ಹೆಚ್ಚು ಸೈನಿಕರು LAC ಯಲ್ಲಿದ್ದಾರೆ. ಆದರೆ ಎಲ್ಲಾ ಸಂಘರ್ಷದ ಪಾಯಿಂಟ್ ಗಳಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳಲಾಗಿದ್ದು, ಡೆಪ್ಸಾಂಗ್ ಮತ್ತು ಡೆಮ್ಚೋಕ್ ನಲ್ಲಿ ಗಸ್ತು ತಿರುಗುವಿಕೆ ಆರಂಭವಾಗಿದೆ.
ಮೇಜರ್ ಜನರಲ್ ಬಿಎಸ್ ಧನೋವಾ ಮತ್ತು ಕರ್ನಲ್ ಸಂಜಯ್ ಪಾಂಡೆ ಸೇನೆಯ ಕ್ರಮವನ್ನು ಪ್ರಶ್ನಿಸಿದ್ದಾರೆ. ಯುದ್ಧದ ಕಾನೂನುಗಳಿವೆ. ಆದರೆ ತಡವಾಗಿ ನಮ್ಮ ಸಶಸ್ತ್ರ ಪಡೆಗಳು ಯುದ್ಧದ ಪ್ರತಿಮೆಗಳನ್ನು" ಅಧ್ಯಯನ ಮಾಡುತ್ತಿವೆ ಎಂದು ನಿವೃತ್ತ ಮೇಜರ್ ಜನರಲ್ ಬಿರೇಂದರ್ ಧನೋವಾ ಟೀಕಿಸಿದ್ದಾರೆ.