ಮುಳ್ಳೆರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಕಿರು ಷಷ್ಠಿ ಉತ್ಸವ ಸಂಪನ್ನವಾಯಿತು. ಮೂಡುಮನೆ ಸುಬ್ರಾಯ ಬಳ್ಳುಳ್ಳಾಯ ಮತ್ತು ಮನೆಯವರ ವತಿಯಿಂದ ಷಷ್ಠಿ ಸೇವೆ ಜರಗಿತು.
ಸಮಾರಂಭದ ಅಂಗವಾಗಿ ಭಕ್ತರಿಂದ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಹರಿದಾಸ ಬಾಲಮುರಳಿ ಶೇಣಿ ಅವರಿಂದ ಹರಿಕಥಾ ಸಂಕೀರ್ತನೆ ಜರಗಿತು.
ಹಾರ್ಮೋನಿಯಂನಲ್ಲಿ ಅಕ್ಷಯ ಭಟ್ ಪಟ್ಲ, ಹರ್ಷಿತಾ ಭಟ್, ತಬಲದಲ್ಲಿ ಲಕ್ಷ್ಮೀಶ ಬೊಳುಂಬು ಸಹಕರಿಸಿದರು. ಗೋವಿಂದ ಬಳ್ಳಮೂಲೆ ನಿರೂಪಿಸಿದರು. ಸೀತಾರಾಮ ಬಳ್ಳುಳ್ಳಾಯ ಕಾಲಾವಿದರನ್ನು ಶಾಲು ಹೊದೆಸಿ ಪ್ರಸಾದವನ್ನಿತ್ತು ಗೌರವಿಸಿದರು.