ಕೊಚ್ಚಿ: ನಟಿ ಹನಿ ರೋಸ್ ನೀಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿತರಾಗಿರುವ ಕೈಗಾರಿಕೋದ್ಯಮಿ ಬಾಬಿ ಚೆಮ್ಮನ್ನೂರ್ ಅವರ ಮೊಬೈಲ್ ಪೋನ್ ಅನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಐಫೆÇೀನ್ ವಶಪಡಿಸಿಕೊಳ್ಳಲಾಗಿದೆ.
ಪೋನ್ ಅನ್ನು ಪೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಬಾಬಿ ಚೆಮ್ಮನ್ನೂರ್ ಅವರ ವೈದ್ಯಕೀಯ ಪರೀಕ್ಷೆ ಬುಧವಾರ ರಾತ್ರಿಯೇ ನಡೆಯಿತು.
ನಟಿಯ ದೂರಿನ ಮೇರೆಗೆ ಬಾಬಿ ಚೆಮ್ಮನ್ನೂರ್ ಅವರನ್ನು ವಯನಾಡಿನ ರೆಸಾರ್ಟ್‍ನಲ್ಲಿ ವಶಕ್ಕೆ ಪಡೆಯಲಾಗಿದೆ. ನಂತರ ಎರ್ನಾಕುಳಂ ಸೆಂಟ್ರಲ್ ಸ್ಟೇಷನ್ ಗೆ ಕರೆತಂದರು.
ಮಂಗಳವಾರ, ಹನಿ ರೋಸ್ ಎರ್ನಾಕುಳಂ ಸೆಂಟ್ರಲ್ ಸ್ಟೇಷನ್ ನಲ್ಲಿ ಖುದ್ದಾಗಿ ದೂರು ದಾಖಲಿಸಿದ್ದರು.