ಉಪ್ಪಳ: ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಎಸ್ ಆರ್ ಎ. ಯು.ಪಿ ಶಾಲೆ ಕುಬಣೂರಿನಲ್ಲಿ ಇತ್ತೀಚೆಗೆ ಜರಗಿತು.
ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ.ಕೆ.ಆರ್ ಧ್ವಜಾರೋಹಣ ಗೈದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಕೆ.ಆರ್ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಎಂ.ಪಿ.ಎಸ್. ಚಾರಿಟೇಬಲ್ ಟ್ರಸ್ಟಿ ಎಂ.ಪಿ.ಬಾಲಕೃಷ್ಣ ಶೆಟ್ಟಿ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಹೊಳ್ಳ, ಕರ್ನಾಟಕ ಸಮಿತಿ ಕಾಸರಗೋಡು ಅಧ್ಯಕ್ಷ ವಕೀಲ ಮುರಳೀಧರ ಬಳ್ಳಕ್ಕುರಾಯ, ಆರ್ ಎಸ್ ಎಸ್ ಮಂಜೇಶ್ವರ ತಾಲೂಕು ಸಂಘ ಚಾಲಕÀ ಸದಾಶಿವ ಭಟ್, ಎಸ್ ಆರ್ ಎ ಯು ಪಿ ಶಾಲಾ ಸಂಚಾಲಕಿ ಮೋಕ್ಷದ ಬಿ ಶೆಟ್ಟಿ, ನಿವೃತ್ತ ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ವನಿತಾ ವಿಂಗ್ ರಾಜ್ಯ ಜೊತೆ ಕಾರ್ಯದರ್ಶಿ ಸುಚಿತಾ ಟೀಚರ್, ಎಸ್ ಆರ್ ಎ ಯು ಪಿ ಶಾಲೆಯ ಮುಖ್ಯಶಿಕ್ಷಕಿ ಮೀರಾ ಆಳ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಹರಿದಾಸ್ ಶೆಟ್ಟಿ ವಂದಿಸಿದರು. ಶ್ರೀಧರ್ ಭಟ್ ನಿರೂಪಿಸಿದರು.
ಬಳಿಕ ಜರಗಿದ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ಸಹಕಾರ ಭಾರತಿಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ, ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಒಡ್ಡoಬೆಟ್ಟು ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ಈಶ್ವರ ಕಿದೂರು ಸಂಘಟನಾ ಚರ್ಚೆಯಲ್ಲಿ ಮಾರ್ಗದರ್ಶನ ನೀಡಿದರು. ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷೆಯಾಗಿ ಚಂದ್ರಿಕಾ ಟೀಚರ್, ಉಪಾಧ್ಯಕ್ಷರಾಗಿ ಶ್ರೀಧರ ಭಟ್ ಸಜಂಕಿಲ, ಅಮಿತಾ ಐಲ, ಹರಿದಾಸ್ ಕುಬಣೂರು, ಜಯರಾಮ ಇಚ್ಲಂಗೋಡು, ಸ್ವಾತಿ ಕೊಡ್ಲಮೊಗರು, ದಯಾನಂದ ಕುಬಣೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದೇವಿ ಪ್ರಸಾದ್ ಉಚ್ಚಿಲ್, ಜೊತೆ ಕಾರ್ಯದರ್ಶಿಯಾಗಿ ಮಮತಾ ಬಾಯರು, ಶಿವಪ್ರಸಾದ್ ಕಯ್ಯಾರು,ವಿನಿಶ್ ಐಲ, ಕಿಶೋರ್ ಕುಮಾರ್ ಬಂಬ್ರಾಣ, ಕೃಷ್ಣ ಶರ್ಮ ಮೀಯಪದವು, ನಾಗೇಶ್ ಮಂಜೇಶ್ವರ ಹಾಗೂ ಕೋಶಾಧಿಕಾರಿಯಾಗಿ ರಘುವೀರ್ ರಾವ್ ಆಯ್ಕೆಗೊಂಡರು. ಸದಸ್ಯ ದಯಾನಂದ ಸ್ವಾಗತಿಸಿ, ನಾಗೇಶ್ ವಂದಿಸಿದರು.