ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೂರವಾಣಿ ಮೂಲಕ ಸೋಮವಾರ ಮಾತುಕತೆ ನಡೆಸಿದರು.
ಉತ್ತಮ ಸ್ಥಿತಿಯಲ್ಲಿರುವ ಭಾರತ-ಅಮೆರಿಕ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಚರ್ಚೆ ನಡೆಯಿತು ಎಂದು ಪ್ರಧಾನಿ ಮೋದಿ ಅವರು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ನಮ್ಮ ನೆಚ್ಚಿನ ಸ್ನೇಹಿತ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಸಂತಸ ತಂದಿದೆ. ಟ್ರಂಪ್ ಅವರ ಎರಡನೇ ಅವಧಿಯ ಕಾರ್ಯಕ್ಕೆ ಶುಭಾಶಯ ಕೋರಿದೆ' ಎಂದು ಪೋಸ್ಟ್ ಮಾಡಿದ್ದಾರೆ.