HEALTH TIPS

ಚುನಾವಣಾ ನಿಯಮಗಳ ತಿದ್ದುಪಡಿ| ಮತದಾರರ ಖಾಸಗಿತನ ರಕ್ಷಣೆ ಉದ್ದೇಶ: ರಾಜೀವ್‌ ಕುಮಾರ್

 ನವದೆಹಲಿ: ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್‌ ಕುಮಾರ್, 'ಮತದಾರರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಮತಗಟ್ಟೆಯಲ್ಲಿನ ಸಿ.ಸಿ.ಟಿವಿ ದೃಶ್ಯಗಳನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 'ಮತಗಟ್ಟೆಗೆ ಸಂಬಂಧಿಸಿದ ದತ್ತಾಂಶಗಳ ಬಳಸಿ, ಸುಳ್ಳು ಸಂಕಥನ ಸೃಷ್ಟಿಸುವುದನ್ನು ತಡೆಯುವ ಉದ್ದೇಶವೂ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಹೇಳಿದರು.

'10.5 ಲಕ್ಷ ಮತಗಟ್ಟೆಗಳಲ್ಲಿ 10 ಗಂಟೆಯಷ್ಟು ಮತದಾನ ನಡೆಯುತ್ತದೆ. ಅಂದರೆ, ಅಂದಾಜು ಒಂದು ಕೋಟಿ ಗಂಟೆಗಳಷ್ಟು ದತ್ತಾಂಶ ಸಂಗ್ರಹವಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 8 ಗಂಟೆ ಈ ದತ್ತಾಂಶ ವೀಕ್ಷಿಸುತ್ತಾನೆ ಅಂದುಕೊಂಡರೂ, ಎಲ್ಲ ದೃಶ್ಯಗಳನ್ನು ವೀಕ್ಷಿಸಲು ಆತನಿಗೆ 3,600 ವರ್ಷ ಬೇಕಾಗುತ್ತದೆ' ಎಂದರು.

ಸಿಇಸಿ ಹೇಳಿದ್ದೇನು?

ಟ ಚುನಾವಣಾ ಪ್ರಚಾರದ ವೇಳೆಯ ಧ್ರುವೀಕರಣದಿಂದಾಗುವ ಗಾಯಗಳು ಶಾಶ್ವತವಾಗಿ ಉಳಿಯುತ್ತವೆ

ಟಚುನಾವಣಾ ಪ್ರಚಾರ ಕಾರ್ಯದ ನಿಯಂತ್ರಣ ಅಗತ್ಯ. ರಾಜಕೀಯ ಪಕ್ಷಗಳು ಕೂಡ ಜವಾಬ್ದಾರಿ ಹಾಗೂ

ಸಂವೇದನಾಶೀಲವಾಗಬೇಕಿದೆ

ಟಕೂಲಂಕಷ ಪರಿಶೀಲನೆ ಇಲ್ಲದೆಯೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ

ಟ'ಉಚಿತ ಕೊಡುಗೆ'ಗಳ ವ್ಯಾಖ್ಯಾನ ಕಷ್ಟ. ಈ ವಿಚಾರ ನ್ಯಾಯಾಲಯದ ಮುಂದಿರುವ ಕಾರಣ ಆಯೋಗ ಪ್ರತಿಕ್ರಿಯೆ ನೀಡದು

ಟನಿವೃತ್ತಿ ಬಳಿಕ ಹಿಮಾಲಯ ಪರ್ವತಗಳಲ್ಲಿ ಹಲವು ತಿಂಗಳು ಏಕಾಂಗಿಯಾಗಿ ಕಾಲ ಕಳೆಯುವ ಮೂಲಕ 'ಡಿಟಾಕ್ಸಿಫೈ' ಮಾಡಿಕೊಳ್ಳುವ ಇರಾದೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries