ಬದಿಯಡ್ಕ: ತಿರುವನಂತಪುರಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ, ಶಾಸ್ತ್ರೀಯ ಸಂಗೀತ, ಹಾಗೂ ವಯಲಿನ್ ಸ್ಪರ್ಧೆಗಳಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ ಅನ್ವಿತಾ ಟಿ. 'ಎ 'ಗ್ರೇಡ್ ಪಡೆದಿರುತ್ತಾಳೆ. ಈಕೆ ತಲ್ಪಣಾಜೆ ಶಿವಶಂಕರ ಭಟ್ ಹಾಗೂ ಸುಧಾರಾಣಿ ದಂಪತಿಯ ಪುತ್ರಿ.