ಕೊಚ್ಚಿ: ಶಬರಿಮಲೆ ಸನ್ನಿಧಾನದಲ್ಲಿ ಅಡುಗೆ ತಯಾರಿಸಲು ಯಾತ್ರಿಕರು ಅಡುಗೆ ಅನಿಲ ಸಿಲಿಂಡರ್‍ಗಳನ್ನು ಕೊಂಡೊಯ್ಯುತ್ತಿದ್ದರೆ, ಅವುಗಳನ್ನು ವಶಪಡಿಸಿಕೊಳ್ಳುವಂತೆ ಹೈಕೋರ್ಟ್ ಪೋಲೀಸರಿಗೆ ನಿರ್ದೇಶನ ನೀಡಿದೆ.
ಗರ್ಭಗುಡಿ ಮತ್ತು ಸುತ್ತಮುತ್ತ ಅಡುಗೆ ಮಾಡುವುದು ಭದ್ರತಾ ಬೆದರಿಕೆ ಎಂದು ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್, ನ್ಯಾಯಮೂರ್ತಿ ಎಸ್. ಮುರಳೀಕೃಷ್ಣ ಅವರನ್ನು ಒಳಗೊಂಡ ದೇವಸ್ವಂ ಪೀಠವು ಸೂಚಿಸಿತು. ಎಲ್ಲರಿಗೂ ಅನ್ನದಾನ ಸಂಕೀರ್ಣದಲ್ಲಿ ಆಹಾರ ಒದಗಿಸಲಾಗುವುದರಿಂದ ಅಡುಗೆ ಮಾಡುವ ಅಗತ್ಯವಿಲ್ಲ. ಮಕರ ಬೆಳಕು ನಿಮಿತ್ತ 13 ಮತ್ತು 14 ರಂದು ಪಂಡಿತಾವಳಂನಲ್ಲಿ ಆಹಾರ ವಿತರಣೆಯೂ ನಡೆಯಲಿದೆ. ಎರುಮೇಲಿ ಮತ್ತು ಮುಕ್ಕುಳಿ ಸಾಂಪ್ರದಾಯಿಕ ಮಾರ್ಗಗಳ ಮೂಲಕ ಯಾತ್ರಿಕರ ಹರಿವಿನ ನಿರ್ವಹಣೆಯ ಬಗ್ಗೆ ದೇವಸ್ವಂ ಮಂಡಳಿಯ ಕಾರ್ಯದರ್ಶಿ ವರದಿಯನ್ನು ಸಲ್ಲಿಸಬೇಕು ಎಂದೂ ನ್ಯಾಯಾಲಯ ಸೂಚನೆ ನೀಡಿದೆ.