ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಕೂಡು ಸನ್ನಿಧಿಯಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ, ಮೊಕ್ತೇಸರ ಕೆ.ಜಿ.ಗೌರೀಶಂಕರ ರೈಗಳ ಸಹಕಾರದೊಂದಿಗೆ ಕಿರುಷಷ್ಠಿ ಹಾಗೂ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಜ.4 ಶನಿವಾರ ಸಂಜೆ 7.30 ಕ್ಕೆ ರಂಗಪೂಜೆ, ರಾತ್ರಿ 8 ಕ್ಕೆ ಅತ್ತಾಳ ಪೂಜೆ, ಪ್ರಸಾದ ವಿತರಣೆ,8.30ರಿಂದ ಊರ ಬಾಲ ಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಿತು.
ಭಾನುವಾರ ಬೆಳಿಗ್ಗೆ 6ಕ್ಕೆ ಗಣಪತಿ ಹವನ, 7ಕ್ಕೆ ದೀಪಪ್ರತಿಷ್ಠೆ, ಉಷಃಪೂಜೆ, 8ರಿಂದ 11ರ ವರೆಗೆ ವಿವಿಧ ತಂಡಗಳಿಂದ ಭಜನೆ, 11 ರಿಂದ ನವಕಾಭಿಷೇಕ, ಶಾಂಭವೀ ಪ್ರಾಣೇಶ್ ಬೆಂಗಳೂರು ಅವರಿಂದ ಹರಿಕಥಾ ಸತ್ಸಂಗ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀರಕ್ತೇಶ್ವರಿ ತಂಬಿಲ ಸೇವೆ, ಭಜನೆ, 6 ರಿಂದ ತಾಯಂಬಕ, 7ಕ್ಕೆ ಏಣಿಯರ್ಪು ಕೋರಂಬತ್ತ್ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ 7.30ರಿಂದ ಮಹಾಪೂಜೆ, 8ಕ್ಕೆ ಶ್ರೀಭೂತಬಲಿ ಉತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು. ಅಂದು ರಾತ್ರಿ 11ರಿಂದ ಶ್ರೀವಿಷ್ಣುಮೂರ್ತಿ ದೈವದ ತೊಡಂಙಲ್, ಸೋಮವಾರ ಬೆಳಿಗ್ಗೆ 10.30ಕ್ಕೆ ಶ್ರೀವಿಷ್ಣುಮೂರ್ತಿ ದೈವಕೋಲ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಭಂಡಾರ ತೆರಳುವುದು ನಡೆಯಿತು.
ಜ.27 ರಂದು ಪ್ರತಿಷ್ಠಾ ದಿನದ ಅಂಗವಾಗಿ ಬೆಳಿಗ್ಗೆ 6ಕ್ಕೆ ಗಣಪತಿಹೋಮ, 11 ಕ್ಕೆ ನವಕಾಭಿಷೇಕ, 11.30ಕ್ಕೆ ರಕ್ತೇಶ್ವರಿ ತಂಬಿಲ ಸೇವೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 7 ಕ್ಕೆ ಕಾರ್ತಿಕೋತ್ಸವ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.