ಕಾಸರಗೋಡು: ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ಕೇರಳ ಘಟಕದ ಡಿವೈಎಸ್ಪಿಯಾಗಿ ಕಾಸರಗೋಡಿನ ಕುಂಬಳೆ ಸನಿಹದ ಕುಂಡಾಪು ಗುತ್ತಿನ ಉಮೇಶ್ ರೈ ಆಯ್ಕೆಗೊಂಡಿದ್ದಾರೆ. ನೇಮಕಾತಿ ಪಡೆದಿದ್ದಾರೆ.
ಎನ್‍ಐಎ ಪ್ರಧಾನ ಹುದ್ದೆಗೆ ಇದೇ ಮೊದಲಬಾರಿಗೆ ಗಡಿನಾಡ ಕನ್ನಡಿಗರೊಬ್ಬರು ನೇಮಕವಾಗುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಏಜನ್ಸಿಯಲ್ಲಿ ಎಳವೆಯಲ್ಲೇ ಉದ್ಯೋಗ ಪಡೆದು ತನ್ನ ತನಿಖಾ ಪ್ರಬುದ್ಧತೆ ಹಾಗೂ ಸೃಜನಶೀಲತೆಯಿಂದ ಈ ಹುದ್ದೆಯಲ್ಲಿ ಉನ್ನತಿಗೇರಿದ್ದಾರೆ. ಉಮೇಶ್ ರೈ ಕುಂಬಳೆಯ ಕುಂಡಾಪು ಗುತ್ತಿನ ದೇರಣ್ಣ ರೈ, ಪದ್ಮಾವತಿ ದಂಪತಿಯ ಪುತ್ರ. ಉಮೇಶ್ ರೈ ತನ್ನ ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಕುಂಬಳೆ ಹೋಲಿ ಫ್ಯಾಮಿಲಿ, ಸರ್ಕಾರಿ ಹೈಸ್ಕೂಲಿನಲ್ಲಿ ಪಡೆದಿದ್ದು, ನಂತರ ಮಂಗಳೂರು ವಿ.ವಿಯಲ್ಲಿ ವಾಣಿಜ್ಯ ಪದವಿ ಗಳಿಸಿದ್ದರು.