ಬದಿಯಡ್ಕ: ಹಿರಿಯ ವಿದ್ವಾಂಸ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭ ಇಂದು( ಜನವರಿ 5) ನೀರ್ಚಾಲುಮಹಾಜನ ಸಂಸ್ಕøತ ಕಾಲೇಜು ವಿದ್ಯಾಲಯದಲ್ಲಿ ವಿವಿಧಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಬೆಳಗ್ಗೆ 9.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಮಾರಂಭ ಉದ್ಘಾಟಿಸುವರು. ಬೆಂಗಳೂರಿನ ವಿಶ್ರಾಂತಪ್ರಾಧ್ಯಾಪಕ ಡಾ. ಬಸವರಾಜ ಕಲ್ಗುಡಿ ಅವರು ಅಭಿನಂದನಾ ಗ್ರಂಥ'ಶ್ರೀಪಥ'ವನ್ನು ಬಿಡುಗಡೆಗೊಳಿಸುವರು.ಪ್ರೊ.ಶ್ರೀಕೃಷ್ಣಭಟ್ಟರು ಬರೆದ 'ಆಲೋಕನ' ಮತ್ತು ಅವರಸಂಶೋಧನ ವಿದ್ಯಾರ್ಥಿಗಳು ಬರೆದು ಸಂಕಲಿಸಿದ 'ಅರಿವಿನ ನೆಲೆ ಹುಡುಕಿ' ಎಂಬ ಎರಡು ಕೃತಿಗ¼ನ್ನುಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾx ಬಿಡುಗಡೆಗೊಳಿಸುವರು. ಈ ಸಂದರ್ಭ ಪ್ರೊ.ಶ್ರೀಕೃಷ್ಣ ಭಟ್ಟರವಿದ್ಯಾರ್ಥಿಗಳು ಬರೆದ ಹತ್ತು ಪುಸ್ತಕಗಳು ಅನಾವರಣಗೊಲ್ಳಲಿದೆ. ನೀರ್ಚಾಲು ಮಹಾಜನ ಶಿಕ್ಷಣ ಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. 11 ಗಂಟೆಗೆ ಆರಂಭವಾಗುವ ವಿಚಾರಗೋಷ್ಠಿಯಲ್ಲಿ ಪ್ರೊ.ಶ್ರೀಕೃಷ್ಣಭಟ್ಟರ ಬರವಣಿಗೆಯ ಕುರಿತು ವಿಚಾರ ಮಂಥನ ನಡೆಯಲಿದೆ. ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆವಸಂತಕುಮಾರ ಅಧ್ಯಕ್ಷತೆವಹಿಸುವರು. ಶ್ರೀಕೃಷ್ಣ ಭಟ್ಟರ ಸಾಹಿತ್ಯ ಚಿಂತನೆ ಎಂಬ ವಿಷಯದಲ್ಲಿ ಡಾ.ಪಾದೇಕಲ್ಲು ವಿಷ್ಣುಭಟ್ಟ, ಶ್ರೀಕೃಷ್ಣಭಟ್ಟರಬಹುಭಾಷಾ ಚಿಂತನೆ ಎಂಬವಿಷಯದಲ್ಲಿ ಡಾ. ಮೋಹನ ಕುಂಟಾರು, ಶ್ರೀಕೃಷ್ಣ ಭಟ್ಟರ ವ್ಯಾಕರಣಚಿಂತನೆ ಎಂಬ ವಿಷಯದಲ್ಲಿ ಎಸ್. ಕಾರ್ತಿಕ್‍ಬೆಂಗಳೂರು ಅವರು ವಿಷಯಮಂಡಿಸುವರು.
ಅಪರಾಹ್ನ ಎರಡು ಗಂಟೆಗೆ ಹಂಪಿ ವಿ.ವಿ. ವಿಶ್ರಾಂತ ಕುಲಸಚಿವ ಡಾ. ಎ.ಸುಬ್ಬಣ್ಣ ರೈ ಅವರಿಂದ ಹಳUನ್ನಡ ಮತ್ತು ನಡುಗನ್ನಡ ಕಾವ್ಯಭಾಗಗಳ ವಾZನಕಾರ್ಯಕ್ರಮ 'ಕಾವ್ಯವಿಹಾರ' ಜರುಗಲಿದೆ.ಅಪರಾಹ್ನ 2.30ರಿಂದ ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ.ನ್.ಮೂಡಿತ್ತಾಯಅವರಅಧ್ಯಕ್ಷತೆಯಲ್ಲಿ ಅಭಿನಂzನಕಾರ್ಯಕ್ರಮ ಜರುಗಲಿದೆ. ವಿಶ್ರಾಂತಕುಲಪತಿ ಡಾ. ಬಿ. ಎ. ವಿವೇಕ ರೈ ಅವರು ಅಭಿನಂದನ ಭಾಷಣವನ್ನುಮಾಡಿ,ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಅಭಿನಂದಿಸುವರು.