ಕಾಸರಗೋಡು: ಚೈತನ್ಯ ವಿದ್ಯಾಲಯ, ಋಷಿಕ್ಷೇತ್ರ, ಪಾಯಿಚ್ಚಾಲ್, ಕಾಸರಗೋಡು ಇದರ 2024-25ನೇ ಸಾಲಿನ ವಾರ್ಷಿಕೋತ್ಸವವು ಇತ್ತೀಚೆಗೆ ವಿದ್ಯಾಲಯ ಸಭಾಂಗಣದಲ್ಲಿ ಜರಗಿತು. ಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದಜಿ, ರಾಮಕೃಷ್ಣ ತಪೋವನ್, ಪೊಳಲಿ, ಬಂಟ್ವಾಳ ಇವರು ತಮ್ಮ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದರು.
ಸಮಾರಂಭದಲ್ಲಿ ಬೆಂಗಳೂರಿನ ವಿದ್ಯಾ ಹಬ್ರ್ಸ್ ಪ್ರೈವೇಟ್ ಲಿಮಿಟೆಡ್‍ನ ಮ್ಯಾನೆಜಿಂಗ್ ಡೈರೆಕ್ಟರ್ ಶ್ಯಾಮಪ್ರಸಾದ್ ಕೆ, ಮಂಗಳೂರು ಯೇನಪೋಯ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆಯ ಡಾ. ಅಜಂತಾ, ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಡಾ. ಕೆ ಐ ಶಿವಪ್ರಸಾದ್ ಮುಖ್ಯ ಅಥಿತಿಗಳಾಗಿದ್ದರು. ಚೈತನ್ಯ ಟ್ರಸ್ಟಿನ ಅಧ್ಯಕ್ಷ ಇ ಎಸ್ ಮಹಾಬಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಕ್ಕಳಿಂದ ಭಾರತೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.