ಕುಂಬಳೆ: ಇತಿಹಾಸ ಪ್ರಸಿದ್ದ, ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಮಕರ ಸಂಕ್ರಮಣ ದಿನವಾದ ಮಂಗಳವಾರ ದಿಂದ 18ರ ವರೆಗೆ ನಡೆಯಲಿದ್ದು ಮಂಗಳವಾರ ಧ್ವಜಾರೋಹಣಗೊಂಡು ಚಾಲನೆ ನೀಡಲಾಯಿತು. ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಕಾರ್ಮಿಕತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಂಡವು.
ಮಂಗಳವಾರ ಬೆಳಿಗ್ಗೆ 8ರಿಂದ ಸೋಪಾನ ಸಂಗೀತ (ಅಷ್ಟಪದಿ) ಕೆ.ವಿ. ರಾಜನ್ ಮಾರಾರ್, ಪಯ್ಯನ್ನೂರು ತಂಡದವರಿಂದ ನಡೆಯಿತು. 9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಣಿಪುರ ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ,ಸಂಪಿಗೆಕಟ್ಟೆ ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರ, ಕುಂಟಗೇರಡ್ಕ, ಕುಂಬಳೆ ಸೀಮೆಯ ಗಟ್ಟಿ ಸಮಾಜದವರು ದೇವಿನಗರ ಕುಂಬಳೆ, ಸಾರ್ವಜನಿಕ ಭಕ್ತ ಮಹನೀಯರಿಂದ ದೇವಾಲಯಕ್ಕೆ ಆಗಮಿಸಿತು. 10 ರಿಂದ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ: ಅನ್ನದಾನ ನಡೆಯಿತು. ಸಂಜೆ 5 ಕ್ಕೆ ನಡೆ ತೆರೆದು 5.15ರಿಂದ 7.15ರ ತನಕ ಡಿ. ಸಾವಿತ್ರಿ ಕೆ. ಭಟ್ ದೊಡ್ಡಮಾಣಿ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ ಪ್ರಸ್ತುತಿಗೊಂಡಿತು. 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ರಂಗಪೂಜೆ, ಉತ್ಸವ, ಶ್ರೀ ಭೂತಬಲಿ ನಡೆಯಿತು.
ಇಂದು(ಬುಧವಾರ) ಬೆಳಿಗ್ಗೆ 6.ರಿಂದ ಉತ್ಸವ, ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 5.15 ರಿಂದ 7.30ರ ತನಕ ರಾಗಮಾಲಿಕಾ ತಂಡ ನೆಲ್ಲಿಕಟ್ಟೆಯವರಿಂದ ಭಕ್ತಿ ರಸಮಂಜರಿ, ಸಂಜೆ 6.30ಕ್ಕೆ ದೀಪಾರಾಧನೆ, 7.30ರಿಂದ ಪೂಜೆ, ಸಣ್ಣದೀಪೋತ್ಸವ, ಶ್ರೀ ಭೂತಬಲಿ ನಡೆಯಲಿದೆ.
ನಾಳೆ ಬೆಳಿಗ್ಗೆ 6.ರಿಂದ ಉತ್ಸವ ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಬಲಿ, ಮಧ್ಯಾಹ್ನ 12. ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ವಿಶ್ವರೂಪ ದರ್ಶನ, 6.30ರಿಂದ 8.45 ರ ತನಕ ವಿನಾಯಕ ಹೆಗಡೆ ಮತ್ತು ಬಳಗದವರಿಂದ ಹಿಂದುಸ್ತಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ 9.ರಿಂದ ಪೂಜೆ, ನಡುದೀಪೋತ್ಸವ, ಶ್ರೀ ಬಲಿ ನಡೆಯಲಿದೆ.