ಬೀಜಿಂಗ್: ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಪಾಕಿಸ್ತಾನದ ಉಪಗ್ರಹವನ್ನು ಚೀನಾ, ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಪಿಆರ್‌ಎಸ್‌ಸಿ -ಇಒ1 ಎಂಬ ಉಪಗ್ರಹವನ್ನು 'ಲಾಂಗ್ ಮಾರ್ಚ್-2ಡಿ ಕ್ಯಾರಿಯರ್ ರಾಕೆಟ್' ಮೂಲಕ ಶುಕ್ರವಾರ ಮಧ್ಯಾಹ್ನ 12:07 ಗಂಟೆ ಸುಮಾರಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು.
ಉಪಗ್ರಹವು ಯಶಸ್ವಿಯಾಗಿ ನಿಯೋಜಿತ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ.
ಟಿಯಾನ್ಲು-1 ಮತ್ತು ಲಾಂಟಾನ್-1 ಎಂಬ ಇನ್ನೆರಡು ಉಪಗ್ರಹಗಳನ್ನೂ ರಾಕೆಟ್ ಹೊತ್ತೊಯ್ದಿದೆ.
ಉಭಯ ದೇಶಗಳ ಬಾಹ್ಯಾಕಾಶ ಕ್ಷೇತ್ರದ ಒಪ್ಪಂದದ ಭಾಗವಾಗಿ ಕಳೆದ ಕೆಲ ವರ್ಷಗಳಿಂದ ಚೀನಾವು ಪಾಕಿಸ್ತಾನದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.
ಕಳೆದ ವರ್ಷ ಚೀನಾವು ಪಾಕಿಸ್ತಾನಕ್ಕಾಗಿ ಬಹೂಪಯೋಗಿ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿತ್ತು. 2018ರಲ್ಲಿ ಪಾಕಿಸ್ತಾನದ ಮೊದಲ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳಾದ ಪಿಆರ್‌ಎಸ್‌ಎಸ್-1 ಹಾಗೂ ಪಾಕ್‌ಟಿಇಎಸ್-1ಎಯನ್ನು ಚೀನಾ ಕಕ್ಷೆಗೆ ಸೇರಿಸಿತ್ತು.