ಕಾಸರಗೋಡು: ಕೇರಳ ಪೆಟ್ರೋಲ್ ಪಂಪ್ ಡೀಲರ್ಸ್ ಜ. 13ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಪಂಪುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಿದೆ. ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ಹಾಗೂ ಪೆಟ್ರೋಲ್ ಇಳಿಸುವ ಟ್ಯಾಂಕರ್ ಚಾಲಕರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಂಪು ಮುಚ್ಚಿ ಪ್ರತಿಭಟಿಸಲು ಅಸೋಸಿಯೇಶನ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೇರಳಾದ್ಯಂತ ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಇಂಧನ ಅಲಭ್ಯವಾಗಲಿದೆ.
ಪೆಟ್ರೋಲ್ ಪಂಪುಗಳಿಗೆ ಇಂಧನ ಇಳಿಸುವ ಟ್ಯಾಂಕರ್ ಚಾಲಕರಿಗೆ ನೀಡುವ ಭತ್ತೆಯಲ್ಲಿ ಹೆಚ್ಚಳಗೊಳಿಸುವ ಬೇಡಿಕೆ ಬಗ್ಗೆ ಪೆಟ್ರೋಲ್ ಪಂಪ್ ಡೀಲರ್ಸ್ ಜತೆ ಸಮಾಲೋಚನೆ ನಡೆಸುವ ಮಧ್ಯೆ ಉಂಟಾದ ಘರ್ಷಣೆ ಹಿನ್ನೆಲೆಯಲ್ಲಿ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ಪಂಪ್ ಮುಚ್ಚಿ ಹರತಾಳ ನಡೆಸಲು ತೀರ್ಮಾನಿಸಿದೆ.